Latest

ಆಯವ್ಯಯ ಮಂಡನೆ ಸಂಬಂಧ ಸಚಿವರುಗಳೊಂದಿಗೆ ಪೂರ್ವಭಾವಿ ಸಭೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
2019-20 ನೇ ಸಾಲಿನ ಆಯವ್ಯಯ ಮಂಡನೆ ಸಂಬಂಧ ಎಲ್ಲ ಕಾಂಗ್ರೆಸ್‌ ಸಚಿವರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಇಲಾಖಾವಾರು ಚರ್ಚೆ ನಡೆಸಲಾಯಿತು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಇಂದು ಅಶೋಕ್ ಹೋಟೆಲ್‌ನಲ್ಲಿ ಕರೆದಿದ್ದ ಕಾಂಗ್ರೆಸ್‌ನ ಎಲ್ಲ‌ ಸಚಿವರುಗಳ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಫೆಬ್ರವರಿಯ ಮೊದಲ ವಾರದಲ್ಲಿ ಬಜೆಟ್‌ ಮಂಡನೆ ಮಾಡಲು‌ ಹಣಕಾಸು ಸಚಿವರಾದ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಹೀಗಾಗಿ ಇಲಾಖಾವಾರು ಚರ್ಚಿಸಲು ಎಲ್ಲ ಸಚಿವರುಗಳನ್ನು ಇಂದು ಸಭೆಗೆ ಆಹ್ವಾನಿಸಿದ್ದೆ.
ಸಮ್ಮಿಶ್ರ ಸರಕಾರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವು ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಹೊರಡಿಸಲಾಗಿದೆ. ಅಂತೆಯೇ ಈ ಎರಡೂ ಪ್ರಣಾಳಿಕೆಯಲ್ಲಿರುವ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಈಗಾಗಲೇ ನಿರ್ಧರಿಸಲಾಗಿತ್ತು.‌
ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದ ಆಯವ್ಯಯದಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ.
ಈ ಬಜೆಟ್‌ನಲ್ಲಿ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿ, ಇನ್ನೂ ಜಾರಿಗೆ ಬಾರದ ಕಾರ್ಯಕ್ರಮಗಳನ್ನು ಸಹ ಅನುಷ್ಠಾನ ಮಾಡಲಾಗುತ್ತದೆ.

Home add -Advt

ಸಾಲಮನ್ನಾ ಘೊಷಿಸಿರುವುದರಿಂದ ಅದಕ್ಕೆ ಇಂತಿಷ್ಠು ಹಣ ಮೀಸಲಿರಿಸಿ, ಇತರೆ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ನೀಡುವಂತೆಯೂ ಇಲಾಖಾವಾರು ಸಚಿವರುಗಳಿಗೆ ಸೂಚನೆ ನೀಡಲಾಗಿದೆ ಎಂದರು.‌ಇಂದು ಚರ್ಚಿಸಿದ ಅಂಶಗಳನ್ನು ಹಾಗೂ ಸಚಿವರುಗಳ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವ ಕೆಲಸವನ್ನು ನಾನು ಮಾಡಲಿದ್ದೇನೆ ಎಂದರು.

Related Articles

Back to top button