ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತುರ್ತು ದುರಸ್ತಿ ಹಿನ್ನೆಲೆಯಲ್ಲಿ ಗುರುವಾರ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವೆಡೆ ವಿದ್ಯುತ್ ನಿಲುಗಡಯಾಗಲಿದೆ.
ಮರಾಠಾ ಕಾಲೋನಿ, ಎಸ್.ವಿ. ಕಾಲೋನಿ, ಎಮ್. ಜಿ. ಕಾಲೋನಿ, 1 ನೇ ಮತ್ತು 2ನೇ ರೆಲ್ವೇಗೇಟ್, ಕಾಂಗ್ರೇಸ್ ರೋಡ್, ಸಾವರ್ಕರ್ ರೋಡ್, ನೆಹರು ರೋಡ್, ರಾಯ್ ರೋಡ್, ಅಗರ‍್ಕರ್‌ರೋಡ್, ವ್ಯಾಕ್ಷಿನ್ ಡಿಪೋ, ಹಿಂದು ನಗರ, ರಾಣಾ ಪ್ರತಾಪ್‌ರೋಡ್,. ಕುಡುತುರ್‌ಕರ ಕಂಪೌಂಡ್, ಶಿವಾಜಿ ಇಂಜಿನಿಯರಿಂಗ್, ಪೂರಾನಿಕ ಟಿ.ಸಿ, ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸ್ಥಗಿತವಾಗಲಿದೆ.
ಹಾಗೆಯೇ, ಗುರುವಾರ ಮಧ್ಯಾಹ್ನ12 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ಸುವರ್ಣ ವಿಧಾನಸೌಧ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆವ್ಹಿ ಸುವರ್ಣ ವಿಧಾನಸೌಧ ಉಪಕೇಂದ್ರದಿಂದ ವಿತರಣೆಯಾಗುವ ಪ್ರದೇಶಗಳಿಗೆ ಸಹ ವಿದ್ಯುತ್ ನಿಲುಗಡೆಯಾಗಲಿದೆ.
ಕೊಂಡಸಕೊಪ್ಪ, ಹಲಗಾ, ಬಸ್ತವಾಡ, ಶಗನಮಟ್ಟಿ, ಕಮಕಾರಟ್ಟಿ, ಕೋಳಿಕೊಪ್ಪ, ಬಡೇಕೊಳ್ಳ ಮಠ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್ ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅಲ್ಲದೆ, ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ. ಕೆ. ಕೊಪ್ಪ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ಸಹ ಮಧ್ಯಾಹ್ನ12 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ನವೆಂಬರ್ 30 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ನಾನಾವಾಡಿ ಮತ್ತು ಹಿಂದವಾಡಿ ಪೂರಕದ ಮೇಲೆ ಬರುವ ನಾನಾವಾಡಿ ಏರಿಯಾ, ಆಶ್ರಯವಾಡಿ, ಅಂಗಡಿಕಾಲೇಜ, ಕರಿಯಪ್ಪಾ ಕಾಲೋನಿ, ಶಾಂತಿ ಕಾಲೋನಿ, ಚೌಗುಲೆವಾಡಿ,. ಗೋವಾ ವೇಸ್, ಗುಡ್ ಶೆಡ್‌ರೋಡ್, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರಪೇಟೆ, ದೇಶಮುಖ ರೋಡ್, ಹಿಂದವಾಡಿ, ಖಾನಾಪುರ ರೋಡ್ ಈ ಪ್ರದೇಶಗಳಲ್ಲಿ ನವೆಂಬರ್ ೩೦ ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಡಿಸೆಂಬರ್ 1 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ 110 ಕೆವಿ ವಡಗಾವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಭಾಗ್ಯನಗರ ಮತ್ತು ಆದರ್ಶ ನಗರ ಪೂರಕದ ಮೇಲೆ ಬರುವ ಈ ಭಾಗ್ಯ ನಗರ 1 ರಿಂದ 9ನೇ ಕ್ರಾಸ್, ಅನ್ಗೋಳ ಮೈನ್‌ರೋಡ್, ಛೀದಂಬರ ನಗರ, ಸಾಂಬಾಜಿ ನಗರ, ಕೇಶವ ನಗರ, ಆದರ್ಶ ನಗರ, ಗೊಮಟೇಶ ಕಾಲೇಜ್ ರೋಡ್, ಹಿಂದವಾಡಿ, ಗೋವಾವೆಸ್, ಕೆಎಲ್ಇ ಕಾಲೇಜ್ ರೋಡ್ ಈ ಪ್ರದೇಶಗಳಲ್ಲಿ ಡಿಸೆಂಬರ್ 1 ರಂದು ಮುಂಜಾನೆ 10 ಗಂಟೆಯಿಂದ ಸಂಜೆ 5 ಘಂಟೆಯವರೆಗೆವಿದ್ಯುತ್ ನಿಲುಗಡೆಯಾಗಲಿದೆ.
ಡಿಸೆಂಬರ್ 2 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ವಡಗಾವಿ ಮತ್ತು ವಡಗಾವಿ ಮತ್ತು ಉಧ್ಯಮಭಾಗ ಪೂರಕದ ಮೇಲೆ ಬರುವ ಧಾಮನೆರೋಡ್, ನಿಝಾಮೀಯಾ ಕಾಲನಿ, ವಿಷ್ಣು ಗಲ್ಲಿ, ಬಾಜಾರಗಲ್ಲಿ, ಶಾಪೂರ ಪೊಲೀಸ್ ಸ್ಟೇಷನ್ ರೋಡ್, ರಾಯತಗಲ್ಲಿ, ದತ್ತಗಲ್ಲಿ, ವಜೆಗಲ್ಲಿ, ಛಾವಡಿಗಲ್ಲಿ, ವಡಗಾವಿ, ನಾರರ್ವೇಕರಗಲ್ಲಿ, ನಾಥಪೈ ಸರ್ಕಲ್, ಪವಾರ ಗಲ್ಲಿ, ಬಿಛುಗಲ್ಲಿ, ಸರಾಫ್ ಗಲ್ಲಿ, ಪಾಶಾ ಕಂಪೌಂಡ್, ಗೌಡೆಕಂಪೌಂಡ್, ಮಹಾಲಕ್ಷ್ಮಿಕಂಪೌಂಡ್ , ಮಜುಕರ್ ಕಂಪೌಂಡ್, ಬಡಮಂಜ ಮಾಳ, ಉದ್ಯಮಬಾಗ, ಉಧ್ಯಮಬಾಗ ಇಂಡಸ್ಟ್ರೀಯಲ್ ಏರಿಯಾ, ಅರೋಣ ಇಂಜಿನಿಯರಿಂಗ್, ಪಡಿಕೆಕಂಪೌಂಡ್,ಎ.ಕೆ.ಪಿ ಪೌಂಡ್ರಿ, ಬೆಳಗಾವಿ ಸಿ&ಸಿ ಪತ್ರಾವಳಿ ಕಂಪೌಂಡ್, ಮಹಿಂದ್ರಾ ಸರ್ವಿಸ್ ಸೆಂಟರ್ ಈ ಪ್ರದೇಶಗಳಲ್ಲಿ ಡಿಸೆಂಬರ್ 2 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ