ಪ್ರಗತಿವಾಹಿನಿ ಸುದ್ದಿ, ಹಳಿಯಾಳ
ಚಾಲಕನ ನಿಯಂತ್ರಣ ತಪ್ಪಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಯಾಣಿಸುತ್ತಿದ್ದ ಪೊರಚುನರ್ ಕಾರು ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನಲ್ಲಿ ನಡೆದಿದೆ.
ಹಳಿಯಾಳದಿಂದ ಶಿರಸಿಗೆ ತೆರಳುತ್ತಿರುವ ವೇಳೆ ಹಳಿಯಾಳ ಯಲ್ಲಾಪುರ ರಾಜ್ಯ ಹೆದ್ದಾರಿಯ ತಾಟವಾಳ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಹೊಡೆದಿದೆ. ಘೊಟ್ನೇಕರ ಕುಳಿತ ಬದಿಯೇ ಪಲ್ಟಿಯಾಗಿದ್ದು ಕಾರಿನಲ್ಲಿಯ ಅಪಘಾತ ನಿರ್ವಾಹಕ ಬಲೂನ್ ಗಳು ತೆರೆದುಕೊಂಡಿದ್ದರಿಂದ ಯಾವುದೇ ಜೀವಾಪಾಯ ಸಂಭವಿಸಿಲ್ಲ.ಕಾರಿನಲ್ಲಿದ್ದ ಪುರಸಭೆಯ ಸದಸ್ಯ ಅನಿಲ ಚವ್ವಾಣ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ