Latest

ಜಿಐಟಿ ರಾಷ್ಟೀಯ ಮೇಳ ಔರಾಗೆ ಅದ್ದೂರಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಗರದ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರೂ ದಿನಗಳ ಕಾಲ ನಡೆಯುವ  ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ “ಔರಾ 19” ಕ್ಕೆ  ಜಿ ಐ ಟಿ ವಿದ್ಯಾರ್ಥಿಗಳು ಫ್ಯೂಶನ್ ನೃತ್ಯದ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. 

Home add -Advt

ಇದರಲ್ಲಿ  ಮೂರು ದಿನಗಳ ಕಾಲ  ವಿವಿಧ ಸೃಜನಶೀಲ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಪರಿಣಾಮ ಬೀರುವ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ  ಶೌರ್ಯ ಕ್ಲಬ್ ಆಯೋಜಿಸಿದ್ದ ಅಣಕು ಎಸ್ ಎಸ್ ಬಿ ಆಯ್ಕೆ ಸ್ಪರ್ಧೆ, ಫ್ಯಾಷನ್ ಶೋ, ಪ್ರಾದೇಶಿಕ ಪ್ರತಿಭೆಗಳಿಗೆ ವೇದಿಕೆಯಾಗಿದ್ದ “ರೀಜನಲ್ ಫ್ಲೇವರ್ಸ”  ಸ್ಪರ್ಧೆ, ಶಾಸ್ತ್ರೀಯ ನೃತ್ಯ, ಗಾಯನ, ಸಮೂಹ ನೃತ್ಯ ಹಾಗೂ ಫ್ಯಾಷನ್ ಶೋ ಎಲ್ಲರ ಮನ ಗೆದ್ದವು.

ವಿದ್ಯಾರ್ಥಿಗಳು ಸಾಹಿತ್ಯಕ್ಕೆ ಸಂಬಂಧಪಟ್ಟ ಕವನ ರಚನೆ, ಕಥೆ ಬರೆಯುವುದು ಹೀಗೆ ಹಲವು ಅರ್ಥಪೂರ್ಣ ಸ್ಪರ್ಧೆಗಳಲ್ಲಿ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಿದರು. ಇನ್ನು ಕೆಲವು ವಿದ್ಯಾರ್ಥಿಗಳು ಹಲವು ಸಾಮಾಜಿಕ ಆಗು ಹೋಗುಗಳ ಮತ್ತು ಸಾಮಾಜಿಕ ಪಿಡುಗುಗಳ ಮೇಲೆ ಬೀದಿನಾಟಕಗಳನ್ನು ಪ್ರದರ್ಶಿಸಿದರು.

ಹೀಗೆ ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಮತ್ತು ಕಲಾತ್ಮಕ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಪ್ರೋತ್ಸಹಹಿಸಲು ರಾಷ್ಟ್ರ ಮಟ್ಟದ ವೇದಿಕೆಯಾಗಿದ್ದ ಕರ್ನಾಟಕದ ಹೆಸರಾಂತ “ಔರ -೧೯” ಭರ್ಜರಿ ಆರಂಭ ಸಿಕ್ಕಿದೆ.

Related Articles

Back to top button