Latest

ಜ.30 ರಿಂದ ಹುದಲಿ ಗ್ರಾಮದ ಶ್ರೀ ನಿರ್ವಾಣೇಶ್ವರ ರುದ್ರಾಭಿಷೇಕ ಮತ್ತು ಅನ್ನ ಪ್ರಸಾದ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ 3ನೇ ವರ್ಷದ ಶ್ರೀ ನಿರ್ವಾಣೇಶ್ಚರ ರುದ್ರಾಭಿಷೇಕ ಮತ್ತು ಅನ್ನ ಪ್ರಸಾದ ಕಾರ್ಯಕ್ರಮವನ್ನು  ಜನವರಿ 30 ಮತ್ತು 31 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ.
  ಜನವರಿ  30-1-2019 ರಂದು ಮಧ್ಯಾಹ್ನ 3  ಗಂಟೆಗೆ  ಶ್ರೀ ನಿರ್ವಾಣೇಶ್ವರ ಪಲ್ಲಕಿ ಮೆರವಣಿಗೆ (ಚೆನ್ನಮ್ಮಕಟ್ಟಿ ದೇವಸ್ಥಾನ ದಿಂದ ಗುಡ್ಡದ ದೇವಸ್ಥಾನ ವರೆಗೆ) ಯು ಜರುಗಲಿದೆ. ನಂತರ ಭಜನಾ ಸೇವೆ: ಹಿರೇಅಂಗ್ರೋಳಿ ಭಜನಾ ಮಂಡಳ, ತಾ. ಖಾನಾಪುರ ಹಾಗೂ ಕಲಮೇಶ್ವರ ವಾರಕರಿ ಭಜನಾ ಮಂಡಳ, ಕಿರ ಹಲಸಿ, ತಾ. ಖಾನಾಪುರ ಇವರುಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9:30 ಗಂಟೆಗೆ ದೇವಸ್ಥಾನದ ಜೀರ್ಣೋದ್ದಾರ ನಿಮಿತ್ತ ಸ೦ಗ್ಯಾ-ಬಾಳ್ಭಾ ನಾಟಕ, ಮಹಿಳಾ ಕಲಾ ತಂಡ ಸಾಲಹಳ್ಳಿ, ತಾ. ರಾಮದುರ್ಗ ಇವರಿಂದ ನಡೆಯಲಿದೆ. 
  ಜನವರಿ 31 ರಂದು ಬೆಳಿಗ್ಗೆ 8  ಗಂಟೆಯಿಂದ  ಮಹಾರುದ್ರಾಭಿಷೇಕ, ಮುಂಜಾನೆ 10-00 ಗಂಟೆಯಿಂದ – ಸುಗಮ ಸ೦ಗೀತ ಕಾರ್ಯಕ್ರಮವನ್ನು ಓಂ ಮೇಲೋಡಿಸ್‌, ಬೆಳಗಾವಿ ಇವರು ನಡೆಸಿ ಕೊಡುವರು. ನಂತರ ಕಾರ್ಯಕ್ರಮ ಜರುಗಲಿದೆ‌.
ಮಧ್ಯಾಹ್ನ- 12  ಗಂಟೆಯಿಂದ – ಮಹಾಪ್ರಸಾದ ಜರುಗಲಿದೆ‌. ಕುಂದರಗಿ ಅಡವಿ ಸಿದ್ಧೇಶ್ವರ ಮಠದ  ಶ್ರೀ ಅಮರ ಸಿದ್ಧೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸುವರು.
ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡ ಕಲಗೌಡ ಮೋದಗಿ ಅಧ್ಯಕ್ಷತೆ ವಹಿಸುವರು. ಪೋಲಿಸ್‌ ಉಪ ಆಯುಕ್ತೆ ಸೀಮಾ ಲಾಟಕರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button