Latest

9 ವರ್ಷದ ವಿದ್ಯಾರ್ಥಿನಿ ಮೇಲೆ 71 ವರ್ಷದ ಪ್ರಾಂಶುಪಾಲನಿಂದ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಮುಜಾಫರ್ ನಗರ: ಮೂರನೇ ತರಗತಿ ವಿದ್ಯಾರ್ಥಿನಿ ಮೇಲೆ 71 ವರ್ಷದ ಪ್ರಾಂಶುಪಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ.

ಮೊಮ್ಮಗಳ ವಯಸ್ಸಿನ ಬಾಲಕಿ ಮೇಲೆ ಪ್ರಾಂಶುಪಾಲ ತನ್ನ ಕೊಠಡಿಗೆ ಕರೆದು ಕೃತ್ಯವೆಸಗಿದ್ದಾನೆ. ವಿಷಯ ಗೊತ್ತಾದರೂ ಶಾಲೆಯ ಇನ್ನೋರ್ವ ಶಿಕ್ಷಕ ಸುಮ್ಮನಿದ್ದ ಎನ್ನಲಾಗಿದೆ.

Home add -Advt

ತೀವ್ರ ರಕ್ತಶ್ರಾವದಿಂದ ಬಳಲುತ್ತಿದ್ದ ಬಾಲಕಿ ಮನೆಗೆ ತೆರಳಿ ತನ್ನ ಪೋಷಕರಿಗೆ ವಿವರಿಸಿದ್ದಾಳೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆ ವೇಳೆ ಬಾಲಕಿ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪ್ರಾಂಶುಪಾಲ ಹಾಗೂ ಇನ್ನೋರ್ವ ಶಿಕ್ಷಕ ಇಬ್ಬರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 376 ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 

ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR ದಾಖಲು

Related Articles

Back to top button