Belagavi NewsBelgaum NewsKarnataka NewsLatest

*BREAKING: ಬೆಳಗಾವಿಯಲ್ಲಿ ಕಾರು-ಲಾರಿ ಭೀಕರ ಅಪಘಾತ*: *ಸ್ಥಳದಲ್ಲೇ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತ ಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಈ ದುರಂತ ಸಂಭವಿಸುದೆ. ಓಂಕಾರ್ ಮಾಂಡ್ರಿ (26), ರೇಷ್ಮಾ ಮಾಂಡ್ರಿ (32) ಹಾಗೂ ದೇವಾಂಶ್ (4) ಮೃತ ದುರ್ದೈವಿಗಳು.

ಇನ್ನುಳಿದ ಮೂವರು ಗಂಭೀರ ವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪುಣೆಯಿಂದ ಸವದತ್ತಿ ಕಡೆಗೆ ಹೊರಟಿದ್ದ ಕಾರಿಗೆ ಮಾಲದಿನ್ನಿ ಕ್ರಾಸ್ ಬಳಿ ಲಾರಿ ಡಿಕ್ಕಿಯಾಗಿ ಈ ಘೋರ ದುರಂತ ಸಂಭವಿಸಿದೆ.

Related Articles

Back to top button