ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂದರ್ಭಾನುಸಾರವಾಗಿ ಕಾಲಕಾಲಕ್ಕೆ ಆಯ್ದ ಮಾರ್ಗದ ರಸ್ತೆಗಳನ್ನು ಏಕಮುಖ ಸಂಚಾರ ಎಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ನಗರ ಪ್ರದೇಶದಲ್ಲಿರುವ ಏಕಮುಖ ಸಂಚಾರ ಮಾರ್ಗಗಳ ಬಗ್ಗೆ ಜಾಗೃತರಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಪೊಲೀಸ್ ಇಲಾಖೆ ಕೋರಿದೆ.
ಏಕಮುಖ ಸಂಚಾರ ಮಾರ್ಗಗಳು
1) ಕಿರ್ಲೋಸ್ಕರ ರಸ್ತೆ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
2) ಕೇಳಕರಬಾಗ ರಸ್ತೆ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
3) ಅನಸುರಕರ ಗಲ್ಲಿ ರಸ್ತೆ -ಪೂರ್ವ ದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು.
4) ರಾಮದೇವ ಗಲ್ಲಿ ರಸ್ತೆ : ದಕ್ಷಿಣ ದಿಂದ ಉತ್ತರ ದಿಕ್ಕೆಗೆ ಸಂಚರಿಸುವುದು.
5) ನೆಹರು ನಗರ 2ನೇ ಕ್ರಾಸ್ : ಕೆಎಲ್‌ಇ ಆಸ್ಪತ್ರೆ ರಸ್ತೆಯಿಂದ ತಟ್ಟೆ ಇಡ್ಲಿ ಹೊಟೇಲ್ ಮುಖಾಂತರ ಆಜಮ್ ನಗರ ರಸ್ತೆಯನ್ನು ಪೂರ್ವ ದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು.
6) ನೆಹರು ನಗರ 3ನೇ ಕ್ರಾಸ್ : ಆಜಮ್ ನಗರ ಸೇರುವ ನೆಹರು ನಗರ 3ನೇ ಕ್ರಾಸ್ ರಸ್ತೆ ಯಿಂದ ಕೆಎಲ್‌ಇ ರಸ್ತೆ ಸೇರುವ ಮಾರ್ಗ (ಮುಜಾವರ್ ಆರ್ಕೇಡ್ ಬದಿಗೆ) ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
7) ಕಲ್ಮಠ ರೋಡ್ : ಉತ್ತರ ದಿಂದ ದಕ್ಷಿಣ ದಿಕ್ಕಿಗೆ ಸಂಚರಿಸುವುದು.
8) ಗಣಪತಿ ಗಲ್ಲಿ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
ಜೊತೆಗೆ, ಸಾರ್ವಜನಿಕರು ತಮ್ಮ ಮಕ್ಕಳನ್ನು ಶಾಲಾ ವಾಹನ/ಆಟೋರಿಕ್ಷಾಗಳಲ್ಲಿ ಕಳುಹಿಸುವಾಗ ಮಕ್ಕಳ ಹಿತದೃಷ್ಟಿಯ ಬಗ್ಗೆ ಎಚ್ಚರವಹಿಸುವುದು. ಶಾಲಾ ವಾಹನ/ ಆಟೋರಿಕ್ಷಾ ಚಾಲಕರು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸಬಾರದೆಂದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರಬೇಕೆಂದು ಕೊರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ