ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಧ್ಯಮ ಕ್ಷೇತ್ರದ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಪ್ರಗತಿ ಮೀಡಿಯಾ ಹೌಸ್ ಮತ್ತು ಕೋಚಿಂಗ್ ಅಕಾಡೆಮಿ ಇನ್ ಸ್ಪೈರ್ ಕರಿಯರ್ ಇನ್ ಸ್ಟಿಟ್ಯೂಟ್ ಉದ್ಘಾಟನೆ ಮಂಗಳವಾರ ನಡೆಯಲಿದೆ.
ಗೋವಾವೇಸ್ ಸಮೀಪ ಫೈರ್ ಬ್ರಿಗೇಡ್ ಕಚೇರಿ ಎದುರು ಆದಿಶಕ್ತಿ ಟಾವರ್ ನ 3ನೇ ಮಹಡಿಯಲ್ಲಿ ಮೀಡಿಯಾ ಹೌಸ್ ಮತ್ತು ಕೋಚಿಂಗ್ ಇನ್ ಸ್ಟಿಟ್ಯೂಟ್ ಆರಂಭವಾಗಿದ್ದು, ಅದೇ ಕಟ್ಟಡದ 2ನೇ ಮಹಡಿಯಲ್ಲಿರುವ ಮಧುಬನ್ ಹೊಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುವುದು.
ಸಂಜೆ 4 ಗಂಟೆಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುದು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇನ್ ಸ್ಟಿಟ್ಯೂಟ್ ಉದ್ಘಾಟಿಸಲಿದ್ದು, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮೀಡಿಯಾ ಸೆಂಟರ್ ಉದ್ಘಾಟಿಸುವರು. ಸಂಸದ ಸುರೇಶ ಅಂಗಡಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಶಾಸಕ ಅನಿಲ ಬೆನಕೆ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸುವರು.
ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಮೀಡಿಯಾ ಸೆಂಟರ್ ಆರಂಭಿಸಿದ್ದು, ಸುದ್ದಿ, ಜಾಹಿರಾತು, ಮಾಧ್ಯಮ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಸೇವೆಗಳೂ ಒಂದೇ ಸ್ಥಳದಲ್ಲಿ ಸಿಗಲಿದೆ. ಪ್ರಗತಿವಾಹಿನಿ ಕೂಡ ಪ್ರಗತಿ ಮೀಡಿಯಾ ಹೌಸ್ ನ ಅಂಗ ಸಂಸ್ಥೆಯಾಗಿದೆ. ಬೆಳಗಾವಿ ಮಟ್ಟಿಗೆ ಇದೊಂದು ವಿನೂತನ ಸಂಸ್ಥೆಯಾಗಿದೆ.
ಕಾರ್ಯಕ್ರಮಕ್ಕೆ ಪ್ರಗತಿವಾಹಿನಿ ಓದುಗರು, ಹಿತೈಷಿಗಳು ಆಗಮಿಸಬೇಕೆಂದು ಪ್ರಗತಿ ಮೀಡಿಯಾ ಹೌಸ್ ಪ್ರೊಪರೈಟರ್ ಹಾಗೂ ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ