Latest

ಮೂರು ದಿನದಲ್ಲಿ ಕಡಿಮೆಯಾಗಿಲ್ಲ ಎಂದರೆ ಸರ್ಜರಿ ಎಂದಿದ್ದಾರೆ ಡಾಕ್ಟರ್ -ಶರಣ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೀವನದಲ್ಲಿ ಮೊದಲ ಬಾರಿಗೆ ತಡೆದುಕೊಳ್ಳಲು ಸಾಧ್ಯವಾಗದಂತಹ ಹೊಟ್ಟೆನೋವು ಅನುಭವಿಸಿದೆ. ಮೂರು ದಿನಗಳಲ್ಲಿ ಕಡಿಮೆಯಾಗಿಲ್ಲವೆಂದರೆ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ನಟ ಶರಣ್ ತಿಳಿಸಿದ್ದಾರೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಇದೀಗ ಡಿಸ್ಚಾರ್ಜ್ ಆಗಿದ್ದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಮಸಲ್ ಕ್ಯಾಚ್ ಇರಬೇಕು ಎಂದು ನಾನು ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದೆ. ಸ್ಕ್ಯಾನಿಂಗ್ ಬಳಿಕ ಕಿಡ್ನಿ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದರು.

Home add -Advt

ನಿನ್ನೆ ಅವತಾರ ಪುರುಷ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಾಗಲು ಸ್ವಲ್ಪ ಹೊಟ್ಟೆನೋವು ಇತ್ತು. ಕೆಲ ಗಂಟೆಗಳಲ್ಲೇ ತಡೆದುಕೊಳ್ಳಲು ಸಾಧ್ಯವಾಗದಷ್ಟು ನೋವು ಆರಂಭವಾಯಿತು. ಚಿತ್ರತಂಡದವರೆ ಆಸ್ಪತ್ರೆಗೆ ಕರೆದುಕೊಂಡು ಬಂದರು. ವೈದ್ಯರು ಕಿಡ್ನಿಯಲ್ಲಿ ಸಣ್ಣ ಪ್ರಮಾಣದ ಸ್ಟೋನಿದೆ. ಹೆಚ್ಚು ನೀರು ಕುಡಿಯಬೇಕು. ಎರಡು ದಿನ ರೆಸ್ಟ್ ಮಾಡಿ ಎಂದಿದ್ದಾರೆ. ಆದರೂ ನೋವು ಕಡಿಮೆಯಾಗಿಲ್ಲ ಎಂದರೆ ಸರ್ಜರಿ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದು ವಿವರಿಸಿದರು.

Related Articles

Back to top button