ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಮೀಪದ ಹಿಂಡಲಗಾ ಜಯನಗರದ ನೂತನ ಶ್ರೀ ಮಲ್ಲಿಕಾರ್ಜುನ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವ ಫೆ.೧೭ರಿಂದ ಆರಂಭಗೊಂಡಿದೆ.
೧೮ ರಂದು ಬೆಳಗ್ಗೆ ೫ ರಿಂದ ೧೦ರವರೆಗೆ ಗಂಗಾ ಪೂಜೆ, ವಿಘ್ನೇಶ್ವರ ಪೂಜೆ, ಸ್ವಸ್ತಿನಂದಿ ಪೂಜೆ, ವರಣ ವಾಸ್ತು, ನವಗ್ರಹ ಕಾಂತಿ, ಅಷ್ಟದಿಕ್ಪಾಲಕರು, ರುದ್ರ ಹೋಮ, ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕಳಸಾಭಿಷೇಕ ಪೂರ್ಣಾಹುತಿ ಯಾಗ ನಡೆಯುವುದು.
ಪಾಶ್ಚಾಪುರದ ವಿಶ್ವಾರಾಧ್ಯ ಶಿವಾಚಾರ್ಯರು, ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಜಿ, ದತ್ತವಾಡದ ಸದ್ಗುರು ಅದೃಶ್ಯದೇವ ಬಾಬಾ ಮಹಾರಾಜರು ಸಾನಿಧ್ಯ ವಹಿಸುವರು. ಪುರೋಹಿತ ಸೇವೆಯನ್ನು ಬಸಯ್ಯ ಸ್ವಾಮಿಜಿ, ಸಿದ್ಧಲಿಂಗಯ್ಯ ಸ್ವಾಮಿಜಿ ನಡೆಸಿಕೊಡುವರು ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಹೊಸಪೇಟಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ