ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾರ್ಕೆಟ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಮೋಟರ್ ವಾಹನ ಕಳ್ಳನೋರ್ವನನ್ನು ಬಂಧಿಸಿದ್ದು, 75 ಸಾವಿರ ರೂ. ಮೌಲ್ಯದ 4 ಬೈಕ್ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರ ಮತ್ತು ವಿವಿಧ ಕಡೆಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡಿದ ಆರೋಪಿತರ ಪತ್ತೆಗೆ ಜಾಲಬೀಸಿದ್ದ ಮಾರ್ಕೆಟ್ ಠಾಣೆಯ ಪೊಲೀಸರು, ಸಂಶಯದ ಮೇಲೆ ಶಿವಾಜಿ ನಗರದ ಶಹಾಬಾಜ ದಸ್ತಗೀರ ಬೋಜಗಾರ (22) ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.
2015 ಮತ್ತು 2018ನೇ ಸಾಲಿನಲ್ಲಿ ಈತ ಕಳ್ಳತನ ಎಸಗಿದ್ದಾಗಿ ಒಪ್ಪಿಕೊಂಡ. ಕೂಲಂಕಷವಾಗಿ ವಿಚಾರಣೆಗೊಳಡಿಸಿದಾಗ ನಗರದ ಅಸದಖಾನ್ ಕಾಲನಿ, ಪಿಡಬ್ಲುಡಿ ಕ್ವಾಟರ‍್ಸ್ ರೋಡ, ಕಾಮತಗಲ್ಲಿ ಕ್ರಾಸ್, ಭರತೇಶ ಹೈಸ್ಕೂಲ್ ಹತ್ತಿರ ಸಹ ವಿವಿಧ ಕಂಪನಿಯ 4 ಮೋಟರ್ ಸೈಕಲ್‌ಗಳನ್ನು ಕಳ್ಳತನ ಮಾಡಿ ಕಿಲ್ಲಾ ಹತ್ತಿರ ಒಂದು ಸ್ಥಳದಲ್ಲಿ ಬಚ್ಚಿಟ್ಟಿದ್ದಾಗಿ ತಿಳಿಸಿದ್ದಾನೆ. ಎಲ್ಲವನ್ನೂ ವಶಕ್ಕೆ ಪಡೆಯಲಾಯಿತು.
ಹಳೆಯ ಪ್ರಕರಣಗಳನ್ನು ಸತತವಾಗಿ ಬೆನ್ನಟ್ಟಿ ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೇಕ್ಟರ ವಿಜಯ ಮುರಗುಂಡಿ ಹಾಗೂ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಡಿ. ಸಿ. ರಾಜಪ್ಪ ಪ್ರಶಂಸಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ