Kannada NewsKarnataka NewsLatest

*ವೃದ್ಧಾಶ್ರಮದಲ್ಲಿಯೇ ಆತ್ಮಹತ್ಯೆಗೆ ಶರಣಾದ ದಂಪತಿ*

ಪ್ರಗತಿವಾಹಿನಿ ಸುದ್ದಿ: ವೃದ್ಧಾಶ್ರಮಕ್ಕೆ ಸೇರಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ.

ಜೆ.ಪಿ.ನಗರದ 8ನೇ ಹಂತದ ಕಮಲಮ್ಮ ರಾಮಕೃಷ್ಣಪ್ಪ ವೃದ್ಧಾಶ್ರಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಮೂರ್ತಿ (81) ಹಾಗೂ ರಾಧಾ (74) ಆತ್ಮಹತ್ಯೆಗೆ ಶರಣಾದವರು.

2021ರಲ್ಲಿ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿದ್ದ ದಂಪತಿಯನ್ನು ವಾಪಸ್ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಮಗನಿಗೆ ಬೇರೆ ಮನೆ ಮಾಡಿಕೊಡುವಂತೆ ಕೇಳಿದ್ದರು. ಬಳಿಕ ಕಳೆದ ತಿಂಗಳು ಜೆ.ಪಿನಗರದ ವೃದ್ಧಾಶ್ರಮಕ್ಕೆ ಬಂದು ಸೇರಿದ್ದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಲು ಹೋಗಿದ್ದ ದಂಪತಿ ವೃದ್ಧಾಶ್ರಮದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೃದ್ಧಾಶ್ರಮದವರ ಮಾಹಿತಿ ಪ್ರಕಾರ ಟಿವಿ ನೋಡುವ ವಿಚಾರವಾಗಿ ಇಬ್ಬರಿಗೂ ಮನಸ್ತಾಪವಾಗಿತ್ತು. ಬಳಿಕ ಊಟ ಮಾಡಿ ಮಲಗಲು ಹೋಗಿದ್ದರು. ದಂಪತಿ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button