Kannada NewsKarnataka NewsLatest

ಬಳ್ಳಾರಿ ವಿವಿ ವಿಸಿಯಾಗಿ ಸಿದ್ದು ಅಲಗೂರ ನೇಮಕ

ಬಳ್ಳಾರಿ ವಿವಿ ಉಪಕುಲಪತಿಯಾಗಿ ಸಿದ್ದು ಅಲಗೂರ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಿದ್ದು ಪಿ. ಅಲಗೂರು ಅವರನ್ನು ಬಳ್ಳಾರಿಯ ವಿಜಯ ನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.

Home add -Advt

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಬಾಯಿ ವಾಲಾ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಿದ್ದು ಅಲಗೂರು 4 ವರ್ಷದ ಅವಧಿಗೆ ನೇಮಕವಾಗಿದ್ದಾರೆ.

ಬಳ್ಳಾರಿ ವಿವಿ ಕುಲಪತಿಯಾಗಿದ್ದ ಡಾ.ಸುಭಾಸ್ ಎಂ.ಎಸ್. ಅವರ ಅವಧಿ ಮುಗಿದ ನಂತರ ಹಿರಿಯ ಡೀನ್ ಕೆ.ಆರ್.ವೇಣುಗೋಪಾಲ ರೆಡ್ಡಿ ಅವರನ್ನು ಉಸ್ತುವಾರಿ ಉಪಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು.

ಕುಲಪತಿ ಆಯ್ಕೆ ಸಂಬಂಧ ನೇಮಕವಾಗಿದ್ದ ಸಮಿತಿ ಶಿಫಾರಸ್ಸು ಮಾಡಿದ್ದ ಮೂರು ಹೆಸರಲ್ಲಿ ಸಿದ್ದು ಅಲಗೂರು ಅವರನ್ನು ಅಂತಿಮಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

Related Articles

Back to top button