Kannada NewsKarnataka News

ಮಹಾರಾಷ್ಟ್ರದಿಂದ ಬೆಳಗಾವಿಗೆ ಗಾಂಜಾ ಸಾಗಿಸುತ್ತಿದ್ದ ಖದೀಮರು ಅರೆಸ್ಟ್

 ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ – 

ಬೆಳಗಾವಿಗೆ ಮಹಾರಾಷ್ಟ್ರದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳಿಂದ ೮ ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮಿರಜ್‌ನ ಫಾರೂಕ್ ಆಲಮನವಾಜ್ ಖಾನ್ (೩೭) ಅಮನ್ ಅಕ್ರಮ ಜಮಾದಾರ್ (೨೦), ಬಂಧಿತ ಆರೋಪಿಗಳು. ಆರೋಪಿಗಳು ಮೀರಜ್‌ನಿಂದ ಬೆಳಗಾವಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಮಹಾರಾಷ್ಟ್ರದ ಪಂಢರಪುರ ಸೇರಿದಂತೆ ನಾನಾ ಭಾಗಗಳಿಂದ ಗಾಂಜಾ ಸಾಗಾಟ ಮಾಡುತ್ತಿರುವ ಸಂಗತಿ ಪತ್ತೆಯಾಗಿದೆ. ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಹಾಗೂ ೨.೪೯ ಲಕ್ಷ ರೂ. ಮೌಲ್ಯದ ಒಟ್ಟು ೮.೩೦೦ ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ, ಸಿಬ್ಬಂದಿ ಎಚ್.ಎಸ್.ನಿಸುನ್ನವರ, ಬಿ.ಎನ್.ಬಳಗನ್ನವರ, ಎಸ್.ಎಸ್.ಪಾಟೀಲ, ಎಂ.ಎಂ.ಒಡೆಯರ್, ಎಸ್.ಎಂ.ಭಜಂತ್ರಿ, ವೈ.ಡಿ.ನದಾಫ್, ಎಸ್.ಬಿ.ಪಾಟೀಲ ದಾಳಿ ನಡೆಸಿದ್ದಾರೆ.

 

ಕೇಂದ್ರ ಸಚಿವ ಅಮೀತ್ ಷಾ ಅವರಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರದಾನ

 

 

Related Articles

Back to top button