Latest

ಸರ್ಕಾರಿ ವಿಶೇಷ ಚೇತನ ನೌಕರರಿಗೂ ಪ್ರತ್ಯೇಕ ಕ್ರೀಡಾಕೂಟಕ್ಕೆ ಒತ್ತಾಯಿಸಿ ಕ್ರೀಡಾ ಸಚಿವರಿಗೆ ಮನವಿ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಜರುಗುವ ಸರಕಾರಿ ನೌಕರರ ಕ್ರೀಡಾಕೂಟದಂತೆ ಸರ್ಕಾರಿ ವಿಶೇಷ ಚೇತನ ನೌಕರರಿಗೂ ಕೂಡಾ ಪ್ರತ್ಯೇಕ ಕ್ರೀಡಾಕೂಟವನ್ನು ಆಯೋಜಿಸುವಂತೆ ಒತ್ತಾಯಿಸಿ ವಿಶೇಷ ಚೇತನ ನೌಕರರ ಸಂಘದ ವತಿಯಿಂದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ರಹೀಮ್ ಖಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಶೇಷ ಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಸಾಮಾನ್ಯ ಸರಕಾರಿ ನೌಕರರೊಂದಿಗೆ ವಿಶೇಷ ಚೇತನ ನೌಕರರು ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ. ಅನೇಕ ಸರಕಾರಿ ವಿಶೇಷ ಚೇತನರು ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಹಾಗಾಗಿ ಸರಕಾರಿ ವಿಶೇಷ ಚೇತನ ನೌಕರರಿಗೂ ಕೂಡಾ ಅವರ ವಿಕಲತೆಗೆ ಅನುಗುಣವಾಗಿ ಪ್ರತ್ಯೇಕ ಕ್ರೀಡಾಕೂಟವನ್ನು ಆಯೋಜನೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಳಿಕ ಸಚಿವರಾದ ರಹೀಮ್ ಖಾನ್ ಮಾತನಾಡಿ, ಸರಕಾರಿ ವಿಶೇಷ ಚೇತನರಿಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂಬ ಮನೋಭಾವನೆ ಇರುತ್ತದೆ. ಅಧಿಕಾರಿಗಳ ಸಭೆಯನ್ನು ಕರೆದು ಮುಂದಿನ ವರ್ಷ ಜರುಗುವ ಸರಕಾರಿ ನೌಕರರ ಕ್ರೀಡಾಕೂಟದಲ್ಲೇ ವಿಶೇಷ ಚೇತನರ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಮಯದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ಉಪಾಧ್ಯಕ್ಷ ರತ್ನವ್ವ ಭರಮಪ್ಪ ನಗರ, ಶಿಕ್ಷಕರಾದ ನಾಗಪ್ಪ ನರಿ, ಶ್ರೀನಿವಾಸರಾವ್ ಕುಲಕರ್ಣಿ ಮುಂತಾದವರು ಹಾಜರಿದ್ದರು.

ಸರಕಾರಿ ವಿಶೇಷ ಚೇತನ ನೌಕರರಿಗೂ ಕೂಡಾ ಪ್ರತ್ಯೇಕ ಕ್ರೀಡಾಕೂಟವನ್ನು ಆಯೋಜಿಸುವಂತೆ ಒತ್ತಾಯಿಸಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ರಹೀಮ್ ಖಾನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button