ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಮೂವರು ಮನೆಗಳ್ಳರನ್ನು ಬಂಧಿಸಿರುವ ಬೆಳಗಾವಿ ಗ್ರಾಮೀಣ ಪೊಲೀಸರು ಎರಡು ಬೈಕ್ ಸಮೇತ ೧೦ ಲಕ್ಷದಷ್ಟು ಬಂಗಾರ & ಬೆಳ್ಳಿಯ ಆಭರಣಗಳನ್ನು ಜಪ್ತು ಮಾಡಿದ್ದಾರೆ. ಬೆಳಗಾವಿ (ಗ್ರಾ) ಮತ್ತು ಕಾಕತಿ ಠಾಣೆಯ 6 ಪ್ರಕರಣಗಳು ಪತ್ತೆಯಾಗಿವೆ.
ಹಂಗರಗಾ ಗ್ರಾಮದಲ್ಲಿ ಹಗಲಿನಲ್ಲಿ ಮನೆ ಕಳ್ಳತನ ಮಾಡಿ ಬಂಗಾರ, ಬೆಳ್ಳಿಯ ಆಭರಣಗಳು ಹಾಗೂ ಹಣ ಕಳ್ಳತನವಾದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 16ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಬೆಳಗಾವಿ ಗ್ರಾಮೀಣ ಎಸಿಪಿ ಕೆ ಶಿವಾರೆಡ್ಡಿ ಮತ್ತು ಅಪರಾಧ ವಿಭಾಗದ ಎಸಿಪಿ ಮಹಾಂತೇಶ್ವರ ಜಿದ್ದಿ ಮೇಲ್ವಿಚಾರಣೆಯಲ್ಲಿ ಬಲೆ ಬೀಸಿದ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪಿಐ ಸುನೀಲ್‌ಕುಮಾರ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿತ್ತು.
ಹಿಂಡಲಗಾ, ಬಾಕ್ಸೈಟ್ ರೋಡ ಹತ್ತಿರ ಸಂಶಯಾಸ್ಪದ ರೀತಿ ತಿರುಗಾಡುತ್ತಿದ್ದ ಯಲ್ಲಪ್ಪಾ ಬಾವಕು ಕುಡಚಿಕರ, (೨೬), ಸಾ: ಸುಳಗಾ ತಾ: ಬೆಳಗಾವಿ, ಯೋಗೇಶ್ ಮಲ್ಲಪ್ಪಾ ಪಾಟೀಲ, (೨೬), ಸಾ: ಸುಳಗಾ ತಾ: ಬೆಳಗಾವಿ, ಮೋಹನ ಪರಶುರಾಮ ಪಾಟೀಲ, (೩೩) ವರ್ಷ, ಸಾ: ಸುಳಗಾ ತಾ: ಬೆಳಗಾವಿ ಇವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಮಚ್ಛೆ, ಹಂಗರಗಾ, ಜಾಡಶಹಪೂರ, ಗುರುಪ್ರಸಾದ ನಗರ, ಬಸುರತೆ ಗ್ರಾಮಗಳಲ್ಲಿ ಹಗಲು ಮನೆಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಿ ಕಳ್ಳತನ ಮಾಡಿ ಬಚ್ಚಿಟ್ಟ ಸುಮಾರು ರೂ.೭,೭೦,೦೦೦ ಮೌಲ್ಯದ ೨೨೦ ಗ್ರಾಂ ಬಂಗಾರದ ಆಭರಣಗಳು, ರೂ. ೫,೦೦೦ ಮೌಲ್ಯದ ೧೫೦ ಗ್ರಾಂ ಬೆಳ್ಳಿಯ ಆಭರಣಗಳು, ಕೃತ್ಯಕ್ಕೆ ಬಳಸಿದ ರೂ.೧,೫೦,೦೦೦ ಮೌಲ್ಯದ ೦೨ ಪಲ್ಸರ್ ಮತ್ತು ರೂ.೨೦,೦೦೦ ಮೌಲ್ಯದ ಹೊಂಡಾ ಆಕ್ಟಿವಾ ಮೋಟರ್ ಸೈಕಲ್ ಹೀಗೆ ಸುಮಾರು ರೂ.೧೦,೦೦,೦೦೦ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ಠಾಣೆಯ ೫ ಮತ್ತು ಕಾಕತಿ ಠಾಣೆಯ ೧ ಪ್ರಕರಣವನ್ನು ಪತ್ತೆ ಮಾಡಲಾಗಿದೆ.
ಈ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸುನೀಲ್‌ಕುಮಾರ ಪಿಐ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ನೇತೃತ್ವದಲ್ಲಿ ಕೃಷ್ಣವೇಣಿ ಪಿ.ಎಸ್.ಐ(ಕಾಸು) ಹಾಗೂ ಪ್ರೋ. ಪಿಎಸ್‌ಐ ಅವಿನಾಶ, ಎ. ವಾಯ್. ಹಾಗೂ ಬಿ. ಎ. ಚೌಗಲಾ, ಬಿ. ಎಸ್. ಬಿಚಗತ್ತಿ, ವಾಯ್. ವಾಯ್. ತಳೇವಾಡ, ಎಮ್.ಎಸ್. ಗಾಡವಿ, ಸಿ. ಎಮ್. ಹುಣಶ್ಯಾಳ, ಎನ್. ಎಮ್. ಚಿಪ್ಪಲಕಟ್ಟಿ, ಜಿ. ವಾಯ್. ಪೂಜಾರ, ದೀಪಕ ಮಾಳವದೆ, ಎಸ್. ಆರ್. ಶಿರಸಂಗಿಕರ ರವರನ್ನೊಳಗೊಂಡ ತಂಡದ ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ