Kannada NewsKarnataka NewsLatest

ನ.23, 24 ಯಡಿಯೂರಪ್ಪ ಪ್ರಚಾರ ಆಖಾಡಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ.23 ಮತ್ತು 24ರಂದು ಬೆಳಗಾವಿ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ಧುಮುಕಲಿದ್ದಾರೆ.

23ರಂದು ಬೆಳಗ್ಗೆ 9.45ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಯಡಿಯೂರಪ್ಪ ಇಲ್ಲಿಂದ ಹೆಲಿಕಾಪ್ಟರ್ ಮೂಲಕ ಅಥಣಿಗೆ ತೆರಳಿವರು. ಅಥಣಿಯಲ್ಲಿ ಮಹೇಶ ಕುಮಟಳ್ಳಿ ಪರ 11 ಗಂಟೆಗೆ ಚುನಾವಣೆ ಪ್ರಚಾರ ಭಾಷಣ ಮಾಡಿ ಹೆಲಿಕಾಪ್ಟರ್ ಮೂಲಕ ಕಾಗವಾಡಕ್ಕೆ ಆಗಮಿಸಿ 12.30ಕ್ಕೆ ಶ್ರೀಮಂತ ಪಾಟೀಲ ಪರ ಪ್ರಚಾರ ಭಾಷಣ ಮಾಡುವರು. ನಂತರ ಹೆಲಿಕಾಪ್ಟರ್ ಮೂಲಕ ಗೋಕಾಕಕ್ಕೆ ತೆರಳಿ 4 ಗಂಟೆಗೆ ಅಲ್ಲಿ ರಮೇಶ ಜಾರಕಿಹೊಳಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. 24ರಂದು ಬೆಳಗ್ಗೆ 10.15ಕ್ಕೆ ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು 11 ಗಂಟೆಗೆ ಯಲ್ಲಾಪುರದಲ್ಲಿ ಆಯೋಜಿಸಲಾಗುವ ಚುನಾವಣೆ ಪ್ರಚಾರ ಸಭೆಯಲ್ಲಿ ಶಿವರಾಮ ಹೆಬ್ಬಾರ್ ಪರ ಪ್ರಚಾರ ಭಾಷಣ ಮಾಡುವರು.

ಅಲ್ಲಿಂದ ಹಿರೆಕೆರೂರಿಗೆ ಆಗಮಿಸಿ 1 ಗಂಟೆಗೆ ಬಿ.ಸಿ.ಪಾಟೀಲ ಪರ ಪ್ರಚಾರ ಮಾಡಲಿದ್ದಾರೆ. ನಂತರ ರಾಣೆಬೆನ್ನೂರಿಗೆ ತೆರಳಿ 4 ಗಂಟೆಗೆ ಅರುಣಕುಮಾರ ಎಂಜಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

Related Articles

Back to top button