Latest

*ಬಜರಂಗದಳ ಕಾರ್ಯಕರ್ತನ ಶವ ನೇತ್ರಾವತಿ ನದಿಯಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ಬಜರಂಗದಳ ಕಾರ್ಯಕರ್ತರೊಬ್ಬರ ಮೃತದೇಹ ನೆತ್ರಾವತಿ ನದಿಯಲ್ಲಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣಿಮಂಗಳೂರು ಹಳೆ ಸೇತುವೆ ಬಳಿ ನಡೆದಿದೆ.

ರಾಜೇಶ್ ಪೂಜಾರಿ (26) ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಮೃತ ರಾಜೇಶ್ ಬಜರಂಗದಳ ಕಲ್ಲಡ್ಕ ಪ್ರಖಂಡ ಗೋರಕ್ಷಾ ಪ್ರಮುಖರಾಗಿದ್ದರು.

Home add -Advt

ಇದೀಗ ನೇತ್ರಾವತಿ ನದಿಯಲ್ಲಿ ರಾಜೇಶ್ ಶವಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಪಾಣಿಮಂಗಳೂರು ಹಳೆ ಸೇತುವೆ ಬಳಿ ಬೈಕ್ ವೊಂದು ನಿಂತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ರಾಜೇಶ್ ಶವವನ್ನು ನದಿಯಿಂದ ಮೇಲಕೆತ್ತಿದ್ದಾರೆ.

ಬಜರಂಗದಳ ಕಾರ್ಯಕರ್ತನಾಗಿದ್ದ ರಾಜೇಶ್ ಪೂಜಾರಿ ಏಕಾಏಕಿ ಶವವಾಗಿ ನದಿಯಲ್ಲಿ ಪತೆಯಾಗಿರುವುದಕ್ಕೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

*ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೊನೆಗೂ ಸಿಕ್ತು ಅವಕಾಶ*

https://pragati.taskdun.com/republic-dayparadekarnataka-tableaunarishaktiselect/

Related Articles

Back to top button