Latest

*ನೀರು ತುಂಬಿದ್ದ ಬಕೇಟ್ ಗೆ ಬಿದ್ದು ಪುಟ್ಟ ಮಗು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ನೀರು ತುಂಬಿದ್ದ ಬಕೆಟ್ ನಲ್ಲಿ ಮಗು ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿಯ 10 ತಿಂಗಳ ಮಗು ಅನುಶ್ರಾವ್ಯ ಮೃತ ಕಂದಮ್ಮ.

Related Articles
Home add -Advt

ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗು, ಪಕ್ಕದಲ್ಲೇ ಇದ್ದ ನೀರು ತುಂಬಿಟ್ಟಿದ್ದ ಬಕೆಟ್ ಗೆ ಆಯತಪ್ಪಿ ಬಿದ್ದಿದ್ದಾಳೆ. ಮಗು ಬಿದ್ದಿದ್ದು ಗಮನಿಸುತ್ತಿದ್ದಂತೆ ಮಗುವನ್ನು ಮೇಲಕೆತ್ತಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಕೊಂಚ ಮೈಮರೆತರೂ ಪುಟಾಣಿ ಮಕ್ಕಳು ಅದೆಂತಹ ದುರಂತ ಮಾಡಿಕೊಂಡುಬಿಡುತ್ತಾರೆ ನೋಡಿ. ಮುದ್ದು ಮಗುವನ್ನು ಕಳೆದುಕೊಂಡಿರಿವ ದಂಪತಿಗಳ ಆಕ್ರಂದನ ಮುಗಿಲು ಮುಟ್ಟಿದೆ.

*ಭೀಕರ ಕಾರು ಅಪಘಾತ; ಮೂವರು ಯುವಕರು ದುರ್ಮರಣ*

https://pragati.taskdun.com/shivamoggacar-lorryaccident3-death/

Related Articles

Back to top button