ಪ್ರಗತಿವಾಹಿನಿ ಸುದ್ದಿ: ನೇಪಾಳ ಪ್ರವಾಹದ ನಂತರ ಇದೀಗ ಮೇಘಾಲಯದ ದಕ್ಷಿಣ ಗಾರೋ ಪರ್ವತ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಸಿಲುಕಿ ಒಂದೇ ಕುಟುಂಬದ ಏಳು ಮಂದಿ ಹಾಗೂ ಮತ್ತು ಮೂವರು ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ.
ನಿರಂತರವಾಗಿ ಮಳೆಯಾದ ಪರಿಣಾಮ ಗಾಸುವಾಪಾರ ಎಂಬ ಪ್ರದೇಶದಲ್ಲಿ ಭೂಕುಸಿತ ಕೂಡ ಸಂಭವಿಸಿದೆ. ಈ ಪರಿಣಾಮ ಪ್ರವಾಹ ಮತ್ತಷ್ಟು ಯಮಸ್ವರೂಪಿಯಾಗಿ ಹರಿದುಬಂದಿದೆ. ಮೃತರ ಪೈಕಿ ಮೂವರು ಅಪ್ರಾಪ್ತರು ಎಂದು ತಿಳಿದುಬಂದಿದೆ.
ಸದ್ಯ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾಕಾರ್ಯ ಆರಂಭವಾಗಿದ್ದು,ಶೋಧ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ