Latest

10ನೇ ತರಗತಿ ಪಠ್ಯದಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಎಸ್ ಎಸ್ ಎಲ್ ಸಿ ಪಠ್ಯ ಪುಸ್ತಕದಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಲಾಗಿದೆ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.

ಗದ್ಯರೂಪದಲ್ಲಿ ಹೆಡ್ಗೆವಾರ್ ಭಾಷಣ ಸೇರಿಸಲಾಗಿದ್ದು, ಆದರ್ಶ ಪುರುಷ ಹೇಗಿರಬೇಕು? ಏನೆಲ್ಲ ಗುಣಗಳನ್ನು ಹೊಂದಿರಬೇಕು? ರಾಷ್ಟ್ರಭಕ್ತಿ ಕುರಿತಾಗಿ ಮಕ್ಕಳು ಕಲಿಯಬೇಕು ಎಂಬ ಕಾರಣಕ್ಕೆ ಪಠ್ಯದಲ್ಲಿ ಅಳವಡಿಸಲಾಗಿದೆ ಎಂದರು.

ಇನ್ನು ಪಠ್ಯದಲ್ಲಿ ಭಗತ್ ಸಿಂಗ್ ಪಾಠ ಕೈಬಿಡಲಾಗಿದೆ. ಭಗತ್ ಸಿಂಗ್ ಕುರಿತು ಪಠ್ಯ ಪೂರಕ ಪಠ್ಯದಲ್ಲಿ ಇತ್ತು. ಮುಖ್ಯ ಭಾಗದಲ್ಲಿ ಇರಲಿಲ್ಲ. ಅಲ್ಲದೇ ಭಗತ್ ಸಿಂಗ್ ಪಾಠದಲ್ಲಿ ಹೆಚ್ಚಾಗಿ ಮಾಹಿತಿ ಇರಲಿಲ. ಹೀಗಾಗಿ ಪುನರಾವರ್ತನೆ ಬೇಡ ಎಂಬ ಕಾರಣಕ್ಕೆ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಕೇಸರಿಕರಣ ಉದ್ದೇಶಕ್ಕೆ ಹೆಡ್ಗೆವಾರ್ ಪಾಠ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ಉದ್ದೇಶವಲ್ಲ. ಕೇಸರಿಕರಣ ಉದ್ದೇಶವಿದ್ದರೆ ಭಗತ್ ಸಿಂಗ್ ಪಾಠ ತೆಗೆಯುತ್ತಿರಲಿಲ್ಲ. 2014ರಲ್ಲಿ ಭಗತ್ ಸಿಂಗ್ ಪಾಠ ಇರಲಿಲ್ಲ. ಬರಗೂರು ರಾಮಚಂದ್ರಪ್ಪ ಭಗತ್ ಸಿಂಗ್ ಪಾಠವನ್ನು ಪೂರಕ ಭಾಗಕ್ಕೆ ಸೇರಿಸಿದ್ದರು. ಪೂರಕ ಭಾಗದಲ್ಲಿದ್ದುದರಿಂದ ಕೈಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪುರಾಣ ಪ್ರವಚನಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ​ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button