ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಡಗಾವಿಯ ಸಫಾರಗಲ್ಲಿ ನಿವಾಸಿಯಾದ ಕೇದಾರ ಪುಂಡಲೀಕ ಕಿತ್ತೂರ ಇವರ ಮಗಳಾದ ಗಾಯತ್ರಿ ಕಿತ್ತೂರ ಆಗಸ್ಟ್ ೯ ರಂದು ಮದ್ಯಾಹ್ನ ೧೨ ಗಂಟೆಗೆ ಮನೆಯಲ್ಲಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಕಾಣೆಯಾಗಿರುತ್ತಾಳೆ.
ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಗಾಯತ್ರಿ ೧೪ ವರ್ಷ ೯ ತಿಂಗಳು, ವರ್ಷದವಳಾಗಿದ್ದು ೫ ಪೂಟ ಎತ್ತರವಾಗಿದ್ದಾಳೆ, ಸದೃಢ ಮೈ, ಕೋಲು ಮುಖ, ಗೋದಿಗೆಂಪು ಮೈ ಬಣ್ಣ, ಕಪ್ಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಮರಾಠಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ.
ಬಾಲಕಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ ೦೮೩೧-೨೪೦೫೨೩೩, ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರವಾಣ ಸಂಖ್ಯೆ: ೦೮೩೧-೨೪೦೫೨೪೪ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮೋ ಸಂಖ್ಯೆ: ೯೪೮೦೮೦೪೦೪೬ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಶಹಾಪೂರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಹೊಟೆಲ್ ನಿಂದ ಹಿಂದೂ ಸಾಧು-ಸಂತರ ಅಪಮಾನ: ಕ್ಷಮೆ ಯಾಚನೆಗೆ 24 ಗಂಟೆ ಗಡುವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ