NationalTravel

*170 ಕೆ.ಜಿ ತೂಕದ ಹೆಬ್ಬಾವು ಸೇರೆ: ಹೆಬ್ಬಾವು ಕಂಡು ತಬ್ಬಿಬ್ಬಾದ ಜನ*

ಪ್ರಗತಿವಾಹಿನಿ ಸುದ್ದಿ: ಈ ಹೆಬ್ಬಾವು ಬರೋಬ್ಬರಿ 170 ಕೆ.ಜಿ ತೂಕವಿದ್ದು 20 ಅಡಿ ಉದ್ದ ಇದೆ. ಇಂಥ ಅಪರೂಪದ ಹೆಬ್ಬಾವು ಉತ್ತರಾಖಂಡ್‌ನ ಕಾಶಿಪುರದ ಸೈನಿಕ ನಗರದಲ್ಲಿ ಕಾಣಿಸಿಕೊಂಡಿದೆ.

ಸ್ಥಳೀಯರು ಹೆಬ್ಬಾವು ಕಂಡು ಅರಣ್ಯ ಇಲಾಖೆಯ ಉರಗ ರಕ್ಷಕ ಮೊಹಮ್ಮದ್ ತಾಲಿಬ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ತಾಲಿಬ್‌ ಅವರು ಸವಾಲಿನ ಕಾರ್ಯಾಚರಣೆ ಎದುರಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. “ಅದರ ಶಕ್ತಿ ಮತ್ತು ವೇಗದಿಂದ, ಹೆಬ್ಬಾವು ಯಾವುದೇ ಕಾಡು ಪ್ರಾಣಿ ಅಥವಾ ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಇಲಾಖೆಯ ತಂಡ ಅದನ್ನು ಸಮಯಕ್ಕೆ ಸರಿಯಾಗಿ ಸೆರೆಹಿಡಿಯದಿದ್ದರೆ, ಅದು ದೊಡ್ಡ ಘಟನೆಗೆ ಕಾರಣವಾಗಬಹುದಿತ್ತು” ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ.

Home add -Advt

Related Articles

Back to top button