Latest

2-3 ಶಾಸಕರ ಅಮಾನತು ಸಾಧ್ಯತೆ: ರಾಜ್ಯ ರಾಜಕೀಯ ಇನ್ನಷ್ಟು ಅತಂತ್ರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕೊನೆಗೂ ಕಾಂಗ್ರೆಸ್ ಅತೃಪ್ತ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಸೂಚನೆ ನೀಡಿದೆ.

ಕಳೆದ ಕೆಲವು ತಿಂಗಳಿನಿಂದಲೂ ಕೆಲವು ಅತೃಪ್ತರ ಆಟವನ್ನು ಸಿಹಿಕೊಂಡು, ತಾಳ್ಮೆಯಿಂದಿದ್ದ ಪಕ್ಷದ ನಾಯಕರು ಶಾಸಕರ ಆಟಾಟೋಪಕ್ಕೆ ತೆರೆ ಎಳೆಯಲು 2 ಅಥವಾ 3 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನುಸಾರ ಪಕ್ಷದಿಂದ ಅಮಾನತುಗೊಳಿಸಲು ಮುಂದಾಗಿದೆ. ಹಾಗಾದಲ್ಲಿ ಅಂತವರ ಶಾಸಕತ್ವವೂ ಅನರ್ಹಗೊಳ್ಳುತ್ತದೆ. 

ಈಗ ಬದಿರುವ ಮಾಹಿತಿ ಪ್ರಕಾರ ರಮೇಶ ಜಾರಕಿಹೊಳಿ ಮತ್ತು ಉಮೇಶ ಜಾಧವ ಅವರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದ್ದು, ಮಹೇಶ ಕುಮಟಳ್ಳಿ ವಿರುದ್ಧ ಕ್ರಮದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. 

ಇಬ್ಬರನ್ನು ಅಮಾನತುಗೊಳಿಸಿ, ಅನರ್ಹಗೊಳಿಸಿದರೆ ಉಳಿದವರು ದಾರಿಗೆ ಬರುತ್ತಾರೆ. ಇಲ್ಲವಾದಲ್ಲಿ ಇದೇ ಆಟ ಮುಂದುವರಿಯಲಿದೆ ಎನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಜೊತೆಗೆ ಈ ಸಂಬಂಧ  ಅಗತ್ಯ ದಾಖಲೆಗಳನ್ನೂ ಸಿದ್ಧಪಡಿಸುತ್ತಿದ್ದಾರೆ.

ಈ ಮಧ್ಯೆ ಗುರುವಾರ ಮತ್ತು ಶುಕ್ರವಾರ ರಾಜ್ಯದ ಗೊಂದಲದ ರಾಜಕೀಯಕ್ಕೆ ಮಹತ್ವದ ಘಟ್ಟವಾಗಿದ್ದು, ಏನೂ ನಡೆಯಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ದೋಸ್ತಿ ಪಕ್ಷಗಳ ಬಲ ಇನ್ನಷ್ಟು ಕುಗ್ಗುವ ಆತಂಕ ಸೃಷ್ಟಿಯಾಗಿದ್ದು, ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. 

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button