
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮದುವೆಯಾಗುವುದಾಗಿ ಹೇಳಿ ಅಪ್ರಾಪ್ತೆಯನ್ನು ಕರೆದೊಯ್ದು ನಿರಂತರವಾಗಿ ಅತ್ಯಾಚಾರಗೈದ ಅಪರಾಧಿಗೆ ಬೆಳಗಾವಿಯ ಪೋಕ್ಸೋ ನ್ಯಾಯಾಲಯದ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ನಿಪ್ಪಾಣಿ ಗ್ರಾಮಿಣ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿತ್ತು. ನಿಪ್ಪಾಣಿ ಗ್ರಾಮಿಣ ಪೋಲಿಸ್ ಠಾಣೆಯ ಗುನ್ನಾ ನಂ॥ 168 /2016 ಕಲಂ.366 376 ಹಾಗೂ (1)(2) (ಐ) ಐಪಿಸಿ ಮತ್ತು ಕಲಂ. 4, 6, ಪೋಕ್ಸೋ ಕಾಯ್ದೆ ಯಡಿಯಲ್ಲಿ ಪ್ರಕರಣವು ದಾಖಲಾಗಿ ನ್ಯಾಯಾಲಯದ ಎಸ್, ಸಿ ನಂ 412/2016 ರಡಿ ಪ್ರಕರಣವು ವಿಚಾರಣಿಯಾಗಿದೆ.
ಫಿರ್ಯಾದಿದಾರನ ಮಗಳಾದ ನೊಂದ ಬಾಲಕಿ ಇವಳು ಅಪ್ರಾಪ್ತ ವಯಸ್ಸಿನವಳು ಅಂತಾ ಗೊತ್ತಿದ್ದರೂ ಕೂಡಾ ದಿನಾಂಕ 14-07-2016 ರಂದು ಆರೋಪಿ ಶ್ರೀಸಂಗಮ್ಮ ಕೃಷ್ಣಾತ ನೀಕಾಡೆ ವಯಸ್ಸು 24 ವರ್ಷ ಸಾ|ಕುರ್ಲಿ ತಾ। ಚಿಕ್ಕೋಡಿ ಜಿಲ್ಲಾ ಬೆಳಗಾವಿ ಇವನು ಬಾಲಕಿಗೆ, ನಿನ್ನನ್ನು ಮದುವೆ ಮಾಡಿಕೋಳ್ಳುತ್ತೆನೆ ಎಂದು ಹೇಳಿ ಪುಸಲಾಯಿಸಿ ಅಪಹರಣ ಮಾಡಿಕೋಂಡು ಕೋಲ್ಟಾಪೂರಕ್ಕೆ ಒಯ್ದಿದ್ದ.
ಅಲ್ಲಿಂದ ಪೂನಾಕ್ಕೆ ಕರೆದುಕೊಂಡು ಹೋಗಿ ಪೂನಾದಿಂದ ಕೋಲ್ದಾಪೂರ ಜಿಲ್ಲೆಯ ಕರವಿರ ತಾಲೂಕಿನ ಆಡೂರ ಗ್ರಾಮಕ್ಕೆ ಕರೆದುಕೊಂಡು ಹೋಗಿ ನಾವಿಬ್ಬರೂ ಗಂಡ ಹೆಂಡತಿ ಇರುತ್ತೇವೆ ಎಂದು ಹೇಳಿ ಒಬ್ಬರ ಮನೆಯನ್ನು ಬಾಡಿಗೆಯಿಂದ ಪಡೆದುಕೊಂಡು ಆ ಮನೆಯಲ್ಲಿ ಒತ್ತಾಯದಿಂದ ಲೈಂಗಿಕ ಕ್ರಿಯೆ ಮಾಡುತ್ತಾ ಬಂದಿದ್ದ.
ತನಿಖಾಧಿಕಾರಿ ಕಿಶೋರ ಭರಣಿ, ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಲೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಧೀಶರಾದ ಸಿ ಎಮ್ ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿಸಿ, ಸಾಕ್ಷಿಗಳ ವಿಚಾರಣೆಯ ಮೇಲಿಂದ 25 ದಾಖಲೆಗಳು ಮತ್ತು ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಸಂಗಮ್ಮ ಕೃಷ್ಣಾತ ನೀಕಾಡೆ (ವಯಸ್ಸು 24 ವರ್ಷ ಸಾಃಕುರ್ಲಿ ತಾಃ ಚಿಕ್ಕೋಡಿ ಜಿಲ್ಲಾ ಬೆಳಗಾವಿ) ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.
20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ & ರೂ 10,000/-ರೂಪಾಯಿ ದಂಡ ವಿದಿಸಿ ಪ್ರಕರಣದ ತೀರ್ಪು ನೀಡಿದ್ದು, ಪೋಕ್ಲೋ ನ್ಯಾಯಾಲಯದಲ್ಲಿ ಪ್ರಕರಣ ಆದೇಶ ಆಗಿದೆ ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ ಒಂದು ಲಕ್ಷ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ಪ್ರಕರಣವನ್ನು ನಡೆಸಿ, ವಾದ ಮಂಡಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ