Election NewsKannada NewsKarnataka NewsPolitics

ಆರ್ ಎಸ್ ಎಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 200 ಸ್ಥಾನ? : ರಾಜ್ಯದಲ್ಲಿ ಎಷ್ಟು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 400 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೆ ಎಂದು ಹೇಳುತ್ತಿರುವುದು ಒಂದು ಕಡೆ ಆದರೆ ಆರ್ ಎಸ್ ಎಸ್ ನ ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿ ಕೇವಲ 200 ಸೀಟ್ ಸಹ ಗೆಲ್ಲುವದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಆರ್ ಎಸ್ ಎಸ್ ನ ಆಂತರಿಕ ಸಮೀಕ್ಷೆ ಪ್ರಕಾರ ದೇಶಾದ್ಯಂತ ಬಿಜೆಪಿ 200 ಸೀಟ್ ಗೆಲ್ಲುವದಿಲ್ಲ ಹಾಗೂ ರಾಜ್ಯದಲ್ಲಿ 8 ಸೀಟ್ ಗೆಲ್ಲುವುದು ಕಷ್ಟ ಆಗಲಿದೆ. ಆದರೆ ಬಿಜೆಪಿ ರಾಜ್ಯದಲ್ಲಿ 14-15 ಸೀಟ್ ಹೇಗೆ ಗೆಲ್ಲುತ್ತಾರೆ ಎಂದು ಪ್ರಶ್ನಿಸಿದರು.‌

ಮುಂದುವರೆದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದಲ್ಲಿ ಬಿಜೆಪಿಯ ಕೆಲ ನಾಯಕರ ಕುಟುಂಬದಿಂದ ಬಿಜೆಪಿ ಪಕ್ಷ ಕಲುಷಿತವಾಗಿದೆ. ಮೂಲ ಬಿಜೆಪಿ ನಾಯಕರು ಬಿಜೆಪಿಯನ್ನು ಮರುಸ್ಥಾಪಿಸಲು ಬಯಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಹಿಂದುತ್ವವಾದಿ ನಾಯಕರಾದ ಕೆ.ಎಸ್ ಈಶ್ವರಪ್ಪ, ಸಿಟಿ ರವಿ, ಬಸವನಗೌಡ ಪಾಟೀಲ್ ಯತ್ನಾಳ ಹಾಗೂ ಅನಂತ್ ಕುಮಾರ್ ಹೆಗಡೆ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button