ಪ್ರಗತಿವಾಹಿನಿ ಸುದ್ದಿ; ಲಕ್ನೋ: ಕಾನೂನು ವಿದ್ಯಾರ್ಥಿಯನ್ನು ಕೊಂದು ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಚರಂಡಿಗೆ ಬಿಸಾಕಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಸ್ನೇಹಿತರನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಶವೇಜ್, ಇಮ್ರಾನ್ ಹಾಗೂ ಸಲ್ಮಾನ್ ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿ ಕೆಲ ಸಲಿಂಗಕಾಮಿ ಸೈಟ್ ಗಳಲ್ಲಿ ನೊಂದಾಯಿಸಲ್ಪಟ್ಟಿದ್ದ. ಅಲ್ಲದೇ ಅವನಿಗೆ ಇತರ ಪುರುಷರೊಂದಿಗೆ ಸಂಬಂಧವಿತ್ತು. ಅಲ್ಲದೇ ವಿದ್ಯಾರ್ಥಿ ಯಶ್ ಕೆಲ ಆಕ್ಷೇಪಾರ್ಹ ಛಾಯಾಚಿತ್ರಗಳ ಮೂಲಕ ಮೂವರನ್ನು ಬ್ಲ್ಯಾಕ್ ಮೇಲ್ ಮಾಡಿ 40,000 ರೂಪಾಯಿ ವಸೂಲಿ ಮಾಡಿದ್ದ.
ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದೇ ಕಾರಣಕ್ಕಾಗಿ ಮೂವರು ಪಕ್ಕಾ ಪ್ಲಾನ್ ಮಾಡಿ ವಿದ್ಯಾರ್ಥಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಕಾಣೆಯಾಗಿದ್ದ ವಕೀಲರ ಸಂಘದ ಉಪಾಧ್ಯಕ್ಷ ಶವವಾಗಿ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ