
ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಜಗತ್ತು ಅದೆಷ್ಟೇ ಮುಂದುವರೆದರೂ ಮೂಢನಂಬಿಕೆಗಳು ಮಾತ್ರ ಸಂಪೂರ್ಣವಾಗಿ ತೊಲಗಿಲ್ಲ. ಆಗಾಗ ಮೌಢ್ಯಾಚಾರಣೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಲ್ಲೋರ್ವ ತಂದೆ-ತಾಯಿಗಳು ನವಜಾತ ಶಿಶುವಿಗೆ ಕಬ್ಬಿಣದ ಕಡ್ಡಿಯಿಂದ ಬರೆ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ.
22 ದಿನಗಳ ಶಿಶು ಫುಲ್ವಂತಿ ಅನಾರೋಗ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು, ಮನೆಗೆ ಬಂದ ಸಂಬಂಧಿಕರು ಬರೆ ಹಾಕಿದರೆ ಸರಿ ಹೋಗುತ್ತದೆ ಎಂದಿದ್ದಾರೆ. ಅದಕ್ಕೆ ತಂದೆ ಅಧಿಕಾರ್ ರಾಜ್ ಹಾಗೂ ತಾಯಿ ಕಂದಮ್ಮನ ಹೊಟ್ಟೆ ಮೇಲೆ ಕಬ್ಬಿಣದ ಕಡ್ಡಿ ಕಾಯಿಸಿ 65 ಕಡೆ ಬರೆ ಹಾಕಿದ್ದಾರೆ.
ಮಗುವಿನ ಹೊಟ್ಟೆ ಮೇಲೆ 65 ಕಡೆ ಸುಟ್ಟ ಗಾಯಗಳಾಗಿದ್ದು, ಮಗುವಿನ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಡಫರೀಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಈ ಬಗ್ಗೆ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಮಗು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದೆ. ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ನಾಗ್ಪುರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ