
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದ್ದು, ಗ್ರೇಡಿಂಗ್ ಬದಲಾಗಿ ಮತ್ತೆ ಅಂಕಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಪದವಿಪೂರ್ವ ಇಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದು, ಜೂನ್ ಕೊನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯು ಶೇಕಡಾವಾರು ಅಂಕ ಪರಿಗಣಿಸಿ ಫಲಿತಾಂಶ ನೀಡಲಾಗುವುದು ಎಂದರು.
ದ್ವಿತಿಯ ಪಿಯು ರೆಗ್ಯೂಲರ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಲಾಗಿದ್ದು, ಗ್ರೇಡಿಂಗ್ ಬದಲು ಹಿಂದಿನಂತೆಯೇ ಅಂಕಗಳನ್ನು ನೀಡಲಾಗುವುದು. ಗ್ರೇಡಿಂಗ್ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಉದ್ಯೋಗ ಪಡೆಯುವ ಸಂದರ್ಭದಲ್ಲಿ ಗ್ರೇಡಿಂಗ್ ನಿಂದ ಅರ್ಹರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅಂಕಗಳನ್ನು ನೀಡಲು ಪಿಯು ಬೋರ್ಡ್ ನಿರ್ಧರಿಸಿರುವುದಾಗಿ ಹೇಳಿದರು.
ವಿದ್ಯುತ್ ತಂತಿ ಸ್ಪರ್ಶ; ಸಹೋದರರ ದುರ್ಮರಣ


