Kannada NewsKarnataka News

*ಶಿಕಾರಿಗೆ ತೆರಳಿದ ವೇಳೆ ಮಿಸ್ ಫೈಯರ್: ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ: ಶಿಕಾರಿಗೆ ತೆರಳಿದ ವೇಳೆ ಮಿಸ್ ಫೈಯರ್ ಆಗಿ ಗುಂಡು ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.‌

Home add -Advt

ಗುರುವಾರ ರಾತ್ರಿ ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ತಾಲ್ಲೂಕಿನ ಕೆರೆಮಕ್ಕಿ ಗ್ರಾಮದ ಯುವಕ ಸಂಜುಗೌಡ(33) ಎಂಬಾತ ಶೂಟೌಟ್ ನಲ್ಲಿ ಮೃತಪಟ್ಟಿರುವ ಯುವಕನಾಗಿದ್ದಾನೆ.‌

ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. 

ಒಂದೇ ಗ್ರಾಮದ ಮೂವರು ಶಿಕಾರಿಗೆ ತೆರಳಿದ್ದು ಘಟನೆ ನಂತರ ಸುಮನ್ ಎಂಬಾತ ತಪ್ಪಿಸಿಕೊಂಡು ಬೈಕ್ ನಲ್ಲಿ ತೆರಳುವಾಗ ಭುಜದ ಮೂಳೆ ಮುರಿದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮತ್ತೊಬ್ಬ ನಿಸರ್ಗ ಎಂಬುವವನು ತಪ್ಪಿಸಿಕೊಂಡಿದ್ದಾನೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Related Articles

Back to top button