Kannada NewsKarnataka NewsNationalPolitics

*ಜನರನ್ನು ಸಂಕಷ್ಟಕ್ಕೆ ನೂಕಿ ಯಾವ ಅಭಿವೃದ್ಧಿ ಮಾಡಲು ಸಾಧ್ಯ? ಬೊಮ್ಮಾಯಿ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಜನರನ್ನು ಸಂಕಷ್ಟಕ್ಕೆ ನೂಕಿ ಯಾವ ಅಭಿವೃದ್ಧಿ ಮಾಡಲು ಸಾಧ್ಯ? ಜಿಎಸ್ ಟಿ ಯಲ್ಲಿ ದೊಡ್ಡ ಪ್ರಮಾಣದ ಸೋರಿಕೆಯಾಗುತ್ತಿದ್ದು, ಅದನ್ನು ತಡೆಗಟ್ಟಿದರೆ ಸಾಕಷ್ಟು ಆದಾಯ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Home add -Advt

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆಯಾದರೆ ಹಣದುಬ್ಬರ‌ ಜಾಸ್ತಿ ಆಗುತ್ತದೆ. ಜನ ಸಾಮಾನ್ಯರ ಮೇಲೆ ಹೊರೆ ಆಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ. ಇದೊಂದು ವಿಪರ್ಯಾಸ ಎಂದು ಹೇಳಿದರು.

ಆರ್ಥಿಕವಾಗಿ ಕೇವಲ ಗ್ಯಾರೆಂಟಿ ಅಷ್ಟೇ ಅಲ್ಲ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ. ಈ ರಾಜ್ಯದಲ್ಲಿ ಜಿಎಸ್ ಟಿ ಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಡಿಕೆ ವ್ಯಾಪಾರ, ಪ್ಲಾಸ್ಟಿಕ್ ವ್ಯಾಪಾರದಲ್ಲಿ ಸೋರಿಕೆ ಆಗುತ್ತಿದೆ. ಸ್ಕ್ರ್ಯಾಪ್ ವ್ಯಾಪಾರದಲ್ಲಿ ಸೋರಿಕೆ ಆಗುತ್ತಿದೆ. ಸಿಎಂ ಸುಮ್ಮನೆ ಕೂತಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು.

ಸರಿಯಾಗಿ ಆರ್ಥಿಕ ನಿರ್ವಹಣೆ ಮಾಡಿದರೆ ಅಲ್ಲೆ ಸಾಕಷ್ಟು ಆದಾಯ ಬರುತ್ತದೆ. ಪೆಟ್ರೋಲ್, ಡಿಸೆಲ್ ಬೆಲೆ ಹೆಚ್ಚಿಸಿ ಜನರ ಮೇಲೆ ತೆರಿಗೆ ಹಾಕುವುದಲ್ಲ. ನಿಮ್ಮ ಆಡಳಿತ ಬಿಗಿ ಮಾಡಿ.  ಆಡಳಿತ ಸುಧಾರಣೆ ಮಾಡಿ, ಸಂಪನ್ಮೂಲ ಕ್ರೋಢಿಕರಿಸಿ ಮತ್ತು ಯಾವ ಯೋಜನೆಗೆ ಯಾವ ಸಂದರ್ಭದಲ್ಲಿ ಯಾವ ರೀತಿಯ ಆದ್ಯತೆ ನೀಡಬೇಕು ಮತ್ತು  ಸಮಯ ಮತ್ತು ಹಣ ಸರಿಯಾಗಿ ನಿರ್ವಹಣೆ ಮಾಡಿದರೆ ಪರಿಹಾರ ಇದೆ. ಅದನ್ನು ಬಿಟ್ಟು ಸರಳ ಮಾರ್ಗ ಅನುಸರಿಸಿ ಜನರಿಂದ ತೆರಿಗೆ ಸಂಗ್ರಹಿಸಿ ಹಂಚಿಕೆ ಮಾಡುತ್ತಿದ್ದಾರೆ. ಜನರ‌ ಮೇಲೆ ತೆರಿಗೆ ಹಾಕುವ ಸರಳ ಮಾರ್ಗ ಅನುಸರಿಸಿದ್ದಾರೆ. ದುಡಿಯುವ, ದುಡಿಸುವ, ಆದಾಯ ಹೆಚ್ಚಿಸುವ, ದಕ್ಷ ಆಡಳಿತದ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಗ್ಯಾರೆಂಟಿ ಮುಂದುವರೆಸಲಿ

ರಾಜ್ಯ ಸರ್ಕಾರ ಗ್ಯಾರೆಂಟಿ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿ ಸ್ಥಗಿತಗೊಳಿಸಲು ನಾವು ಹೇಳುವುದಿಲ್ಲ. ಗ್ಯಾರೆಂಟಿ ಯೋಜನೆಗಳು ಬಡವರಿಗಾಗಿ ಇದ್ದು, ಅವುಗಳನ್ನು ಮುಂದುವರೆಸಬೇಕು. ಅದರ ಜೊತೆಗೆ ಸಂಪನ್ಮೂಲ ಕ್ರೋಢಿಕರಿಸಿ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು ಎಂದು ಆಗ್ರಹಿಸಿದರು. 

ಗ್ಯಾರಂಟಿಗಾಗಿ ವಿಶೇಷ ಸಂಪನ್ಮೂಲ ಕ್ರೋಢೀಕರಿಸಿ ಕೊಡಿ ಆಗ ನಾವು ಸಿಎಂ ಸಿದ್ದರಾಮಯ್ಯಗೆ ಶಹಬ್ಬಾಶ್ ಹೇಳುತ್ತೇವೆ. ಅಭಿವೃದ್ಧಿ ಶೂನ್ಯ ಮಾಡಿ ಜನರ ಮೇಲೆ ತೆರಿಗೆ ಹಾಕಿದರೆ ಅದು ಸರಿಯಾದುದಲ್ಲ ಎಂದು ಹೇಳಿದರು.

Related Articles

Back to top button