Belagavi NewsBelgaum NewsCrimeKannada NewsKarnataka News

*ಬೆಳಗಾವಿಯ ಸಿಸಿಬಿ ಪೊಲೀಸ್‌ರಿಂದ 3 ಗಾಂಜಾ ಮಾರಾಟಗಾರರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ನಗರದ ಸಿಸಿಬಿ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.‌

ಅಕ್ಷಯಕುಮಾರ ಸೋಮಶೇಖರ ಅಂಕಲಗಿ (20), ಆದರ್ಶ ಈರಯ್ಯ ಹಿರೇಮಠ (25), ಮಣಿಕಂಠ ರಾಚಯ್ಯಾ ಉಗರಖೋಡ ಬಂಧಿತ ಆರೋಪಿಗಳು. ಇವರು ಮೈತಾಬ ಎಂಬಾತನಿಂದ ಗಾಂಜಾ ತಂದು,  ಬೆಳಗಾವಿ ನಗರದ ಸಾಗರ ಕಿನಾರಾ ದಾಬಾ, ಯಡಿಯೂರಪ್ಪ ಮಾರ್ಗ ಹತ್ತಿರ ತಮ್ಮ ಬೈಕ್ ಮೇಲೆ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ವೇಳೆ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ರವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ದಾಳಿ ಮಾಡಿದ್ದಾರೆ.

Home add -Advt

ದಾಳಿಯ ವೇಳೆ ಆರೋಪಿತರಿಂದ  ರೂ.55,000 ಮೌಲ್ಯದ 1 ಕೆಜಿ 100 ಗ್ರಾಂ ಗಾಂಜಾ, ರೂ.5,000 ಮೋಬೈಲ್, ರೂ.1,20,000 ಮೌಲ್ಯದ ಬೈಕ್ ಹೀಗೆ ಒಟ್ಟು ರೂ. 1,80,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆಮ

ಎಲ್ಲ ಆರೋಪಿತರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರ. ಸಂ. 124/2026 ಕಲಂ.20(b)(ii)(B) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Related Articles

Back to top button