
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ದಿನಾಂಕ 06.09.2026 ರಂದು ಬೆಳಿಗ್ಗೆ 9 ಘಂಟೆಯಿಂದ ಮಧ್ಯಾಹ್ನ 12 ಘಂಟೆಯವರೆಗೆ 110 ಕೆ.ವಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತಯ ಆಗಲಿದೆ.
ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಅಂಗಡಿ ಕಾಲೇಜ್, ಗಣೇಶಪೂರ, ಮಹಾಲಕ್ಷ್ಮೀ ನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅದೇ ರೀತಿಯಾಗಿ ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಉಚಗಾಂವ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ದಿನಾಂಕ 06.09.2026 ರಂದು ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 12 ಘಂಟೆಯವರೆಗೆ 33 ಕೆ.ವಿ. ಹಿಂಡಲಗಾ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ ಪಂಪ್‌ಹೌಸ್, ಗಣೇಶಪೂರ, ಹಿಂಡಲಗಾ, ಮನ್ನೂರ, ಸರಸ್ವತಿ ನಗರ, ಲಕ್ಷ್ಮೀ ನಗರ, ವಿಜಯ ನಗರ, ಡಿಫೆನ್ಸ್, ಕಾಲನಿ, ಕ್ರಾಂತಿ ನಗರ, ಮಾಸ್ತಿ ನಗರ, ಶಿವಂ ನಗರ, ಗೋಜಗಾ ಹಾಗೂ ಅಂಬೇವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕ.ವಿ.ಪ್ರ.ನಿ.ನಿ., ಕಾ ಮತ್ತು ಪಾ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುವರ್ಣಸೌಧ ಭಾಗದಲ್ಲಿ ವಿದ್ಯುತ್ ವ್ಯತಯ
ಕ.ವಿ.ಪ್ರ.ನಿ.ನಿ ವತಿಯಿಂದ 2ನೇಯ ತ್ರೈಮಾಸಿಕ ನಿರ್ವಹಣೆ ಕೆಲಸಗಳ ಪ್ರಯುಕ್ತ ದಿನಾಂಕ: 06.09.2026 ರಂದು ಮುಂಜಾನೆ 9 ಗಂಟೆಯಿಂದ ಸಂಜೆ 4 ಘಂಟೆಯ ವರೆಗೆ ಸದರಿ 110 ಕೆವಿ ಸುವರ್ಣಸೌಧ ವಿದ್ಯುತ್ ವಿತರಣಾ ಉಪಕೇಂದ್ರದಿಂದ ವಿತರಣೆಯಾಗುವ ಕೆ. ಎಚ್. ಬಿ. ಕಾಲೋನಿ, ವೃದ್ದಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧ ಲೈನ್-2 ಸುವರ್ಣ ಸೌಧ ಲೈನ್-1 ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್‌ಗಲ್ಲಿ, ಆಚಾರ್ಯಗಲ್ಲಿ, ಗದೆ ಮಾರ್ಗ, ಶಹಪೂರ, ಗಣೇಶಪೂರಗಲ್ಲಿ, ಪವಾರ್‌ಗಲ್ಲಿ, ಬಸವನ ಗಲ್ಲಿ, ಸರಾಫ್‌ಗಲ್ಲಿ, ಗಲ್ಲಿ, ಬಿಚ್ಚು ಗಲ್ಲಿ, ಗ್ವಿಟ್ ಗಲ್ಲಿ 1.2.3.4.5 ಕ್ರಾಸ್,. ಮಾರುತಿ ನಗರ, ಹರಿಕಾಕಾ ಕಂಪೌಂಡ ಪರ್ಯಾಯ ಸುವರ್ಣಸೌಧ ಸಾಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರಸ್ತೆ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕ.ವಿ.ಪ್ರ.ನಿ.ನಿ., ಕಾ ಮತ್ತು ಪಾ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



