ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಸ್ಮಾರ್ಟ ಸಿಟಿ ಯೋಜನೆಯಡಿಯಲ್ಲಿ ಮೇಲ್ದರ್ಜೆಗೇರಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಬಸ್ ನಿಲ್ದಾಣದ ತೆರವು ಪ್ರಕ್ರಿಯೆ ಆರಂಭವಾಗಿದೆ.
ನಗರ ಸಾರಿಗೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯಾಗುತ್ತಿದ್ದ ಸಾರಿಗೆಗಳನ್ನು ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಹಾಗೂ ಸಂಸ್ಥೆಯ ವಿಭಾಗೀಯ ಕಚೇರಿಯ ಮುಂದಿನಿಂದ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
ಸ್ಥಳಾಂತರಗೊಂಡ ಸಾರಿಗೆಗಳ ಕಾರ್ಯಾಚರಣೆಯ ವಿವರ :
ವಾ.ಕ.ರ.ಸಾ ಸಂಸ್ಥೆಯ ವಿಭಾಗೀಯ ಕಚೇರಿಯ ಮುಂದೆ ಅನಗೋಳ, ವಡಗಾಂವ, ಸುಳಗಾ, ಪರಮೇಶ್ವರ ನಗರ, ಯಳ್ಳೂರ ಕಾಕತಿ, ಹೋನಗಾ, ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಬಿ.ಕೆ ಕಂಗ್ರಾಳಿ, ಶಾಹೂನಗರ ಕ್ಕೆ ಹೋಗುವ ಬಸ್ಸಗಳು.
ಕೇಂದ್ರ ಬಸ್ ನಿಲ್ದಾಣದ ಖಡೆ ಬಜಾರ ರಸ್ತೆ ಕಡೆಗೆ ಕಣಬರ್ಗಿ, ಮುಚ್ಚಂಡಿ, ಚಂದಗಡ, ರಾಮತೀರ್ಥ ನಗರ, ವಂಟಮೂರಿ, ಸಹ್ಯಾದ್ರಿ ನಗರ, ಕೆ.ಕೆ.ಕೊಪ್ಪ, ಬ.ಅಂಕಲಗಿ, ಅಲಾರವಾಡ, ಚಂದನಹೊಸುರ, ಮಾಸ್ತಮರ್ಡಿ, ಹಲಗಿಮರ್ಡಿ, ತಾರಿಹಾಳ, ಬಸ್ತವಾಡ.
ಕೇಂದ್ರ ಸಬ್ ನಿಲ್ದಾಣದ ಒಳಗೆ ತರಕಾರಿ ಮಾರ್ಕೇಟ್ ರೋಡ್ ಕಡೆ ಹೊಂದಿಕೊಂಡಂತೆ ಹಾಗೂ ಪ್ರಸ್ತುತ ಖಾನಾಪುರ ಪ್ಲಾಟ್‌ಫಾರಂ ಹಾಗೂ ಜಾತ್ರಾ ಬಿಂದುವಿನಿಂದ ಸುಳೆಭಾವಿ, ಪಂತಬಾಳೆಕುಂದ್ರಿ, ದೇ.ಅ.ಕಾಲನಿ, ಬಸರಿಕಟ್ಟಿ, ಮಾರಿಹಾಳ
ಸಂತಿ ಬಸ್ತವಾಡ, ಕಿಣೆ, ಕರ್ಲೇ, ವಾಘವಾಡೆ, ಮಾರ್ಕಂಡೇಯ ನಗರ, ಜಾನೇವಾಡಿ, ಖಾದರವಾಡಿ, ಗುರು ಪ್ರಸಾದ ಕಾಲೋನಿ, ಮಜಗಾಂವಗೆ ಹೋಗುವ ಬಸ್ ಗಳು ನಿಲ್ಲುತ್ತವೆ.
ಜನವರಿ 29 ರಿಂದ ಜಾರಿಗೆ ಬರುವಂತೆ ಸಾರಿಗೆಗಳನ್ನು ಸ್ಥಳಗಳಿಗೆ ಹಂತ ಹಂತವಾಗಿ ಸ್ಥಳಾಂತರಿಸಿ ಕಾರ್ಯಾಚರಣೆಗೊಳಿಸಲಾಗುತ್ತಿದೆ ಎಂದು ವಾಕರಸಾಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಆರ್. ಮುಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ