Belagavi NewsBelgaum NewsKannada NewsKarnataka NewsNational

*ಗೃಹಲಕ್ಷ್ಮೀ ಹಣದಿಂದ ಮಾದರಿ ಕೆಲಸ ಮಾಡಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಜನಪ್ರಿಯ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿ ಮಹಿಳೆ ಓರ್ವಳು ಸಾರ್ವಜನಿಕ ರಸ್ತೆ ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ನಾಗರಡ್ಡಿ ಎಬವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ವಿನಿಯೋಗಿಸಿ ಸಾರ್ವಜನಿಕ ರಸ್ತೆಯನ್ನು ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ.

Home add -Advt

ಯರೇಹಂಚಿನಾಳದಿಂದ ಕೋಟಮಚಗಿ ಸಂಪರ್ಕಿಸುವ ರಸ್ತೆ ಬದಿ ಬೆಳೆದ ಮುಳ್ಳು ಕಂಟಿಗಳನ್ನು ಜೆಸಿಬಿ ತರಿಸಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ತೆರವು ಮಾಡಿಕೊಡಿ ಎಂದು ಸ್ಥಳೀಯಾಡಳಿತಕ್ಕೆ ಅವರು ಮನವಿ ಮಾಡಿದ್ದರು. ಬಹಳ ದಿನಗಳಾದರೂ ಆಡಳಿತ ಕ್ರಮ ಕೈಗೊಳ್ಳದ ಕಾರಣ ಈ ಕ್ರಮ ಕೈಗೊಂಡಿದ್ದಾರೆ.

ಮಹಿಳೆಯ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದ್ದಾರೆ.

Related Articles

Back to top button