Kannada NewsKarnataka NewsLatest

ಅಕ್ರಮವಾಗಿ ಸಾಗಿಸುತ್ತಿದ್ದ 4.5 ಲಕ್ಷ ರೂ. ಸಾರಾಯಿ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೪.೫ ಲಕ್ಷ ರೂ. ಸಾರಾಯಿ ಸಮೇತ ಓರ್ವ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬಾದರವಾಡಿ ಗ್ರಾಮದ ಅಶೋಕ ಸುರೇಶ ಪಾಟೀಲ (೨೫) ಬಂಧಿತ ಆರೋಪಿ, ಶಂಕಾಸ್ಪದ ಹಿನ್ನೆಲ್ಲೆಯಲ್ಲಿ ಇನ್ನೋರ್ವ ಲಕ್ಷ್ಮಣ ಸಾತೇರಿ ಪಾಟೀಲ ಹೆಸರಿನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಗೋವಾದಿಂದ ಖಾನಾಪೂರ ಕಣಕುಂಬಿ ಮಾರ್ಗವಾಗಿ ಸಾಗಿಸುವ ವೇಳೆ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ, ೩೨೪ ಮದ್ಯದ ಬಾಟಲ್ ಗಳು ಒಟ್ಟು ೧೩೩.೫೬೦ ಲೀಟರ್ ಗೋವಾ ಮದ್ಯ ಹಾಗೂ ೨೪ ಬಾಟಲಿ ಬೀಯರ ಬಾಟಲ್ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಈ ವ್ಯಕ್ತಿಯಿಂದ ಲಕ್ಷ್ಮಣ ಮದ್ಯವನ್ನು ಪಡೆದು ಅಕ್ರಮವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ತನಿಖಾ ವೇಳೆಯಲ್ಲಿ ಬೆಳಕಿಗೆ ಬಂದಿದೆ ಈ ವ್ಯಕ್ತಿಗಾಗಿ ಅಧಿಕಾರಿಗಳು ಜಾಲ ಬಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತ ಡಾ.ವೈ ಮಂಜುನಾಥ, ಉಪ ಆಯುಕ್ತ ಜಯರಾಮೇಗೌಡ, ಉಪ ಅಧೀಕ್ಷಕ ಚನ್ನಗೌಡ ಎಸ್ ಪಾಟೀಲ ಇವರ ಮಾರ್ಗದರ್ಶನಲ್ಲಿ ನೀರಿಕ್ಷರು ಮಂಜುನಾಥ ಗಲಗಲಿ, ಎಸ್ ಎಂ.ಪೂಜಾರ, ಸುನೀಲ ಪಾಟೀಲ, ಎಂ ಎಪ್. ಕಟಗೆನ್ನವರ, ಬಿ ಎಸ್.ಅಟಿಗಲ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button