Kannada NewsLatest

ಮಾಸ್ಟರ್ ಗೇಮ್ ಈಜು ಸ್ಪರ್ಧೆ: ಜ್ಯೋತಿ ಕೋರಿಗೆ 4 ಚಿನ್ನದ ಪದಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ಯಾನ್ ಇಂಡಿಯಾ ನ್ಯಾಷನಲ್ ಮಾಸ್ಟರ್ ಗೇಮ್ ಈಜು ಸ್ಪರ್ಧೆಯಲ್ಲಿ ಜ್ಯೋತಿ ಕೋರಿ ನಾಲ್ಕು ಚಿನ್ನ ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಪಡಕೊನೆ ದ್ರಾವಿಡ ಸ್ಪೋರ್ಟ್ಸ್ ಎಕ್ಸಲನ್ಸ್ ಸೆಂಟರ್ ಬೆಂಗಳೂರು ನಲ್ಲಿ ಮೇ 14 ಹಾಗೂ 15ರಂದು ಆಯೋಜಿಸಿದ್ದ ಪ್ಯಾನ್ ಇಂಡಿಯಾ ಮಾಸ್ಟರ್ ಗೇಮ್ಸ್ ಫೌಂಡೇಶನ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಡೋಲಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಾದ ಜ್ಯೋತಿ ಕೋರಿ ಅವರು ವೈಯಕ್ತಿಕ ಸ್ಪರ್ಧೆಯಲ್ಲಿ 4 ಬಂಗಾರದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಮಿಕ್ಸ್ ರಿಲೆನಲ್ಲಿ ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಎಸ ವ್ಹಿ ಮುನ್ಯಾಳ ಅವರ ಸಾಧನೆಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ. ಅವರ ಸಾಧನೆಗೆ ಶ್ರಮಿಸಿದ ತರಬೇತಿದಾರರು, ಅವರಿಗೆ ಸಹಕರಿಸಿದ ಕುಟುಂಬ ವರ್ಗದವರಿಗೊ ಅಭಿನಂದನೆ ಸಲ್ಲಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ; ಸುಗ್ರೀವಾಜ್ಞೆ ಮೂಲಕ ಜಾರಿಗೆ ರಾಜ್ಯಪಾಲರ ಅಂಕಿತ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button