Kannada NewsLatest

ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟ: ದೇಶಕ್ಕೆ ಕೀರ್ತಿ ತಂದ ಚಿಕ್ಕೋಡಿ ಯುವಕ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100 ಮೀಟರ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 200 ಮೀಟರ ಓಟದಲ್ಲಿ ದ್ವೀತಿಯ ಸ್ಥಾನವನ್ನು ಪಟ್ಟಣದ ಆರ್.ಕೆ.ಬಡಾವಣೆಯ ಕ್ರೀಡಾಪಟು ಪ್ರಜ್ವಲ ಬಸವಂತ ಮನಸೂರಗೋಳ ಪಡೆದು ಕೀರ್ತಿ ತಂದಿದ್ದಾನೆ.

ಇಂಟರ್ ನ್ಯಾಷನಲ್ ಆಲ್ ಗೇಮ್ ಆಕ್ಟಿವಿಟಿಸ್ ಡವಲಪ್‌ಮೆಂಟ್ ಪೌಂಡೇಶನ್ ಅವರು ಈಚೆಗೆ ಶ್ರೀಲಂಕಾದಲ್ಲಿ ಹಮ್ಮಿಕೊಂಡಿದ್ದ ಇಂಟರ್‌ನ್ಯಾಷನಲ್ ಯುಥ್ ಗೇಮ್ ಚಾಂಪಿಯನ್‌ಶಿಪ್-2022 ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರಜ್ವಲ ಬಸವಂತ ಮನಸೂರಗೋಳ ಪಾಲ್ಗೊಂಡು 100 ಮೀಟರ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 200 ಮೀಟರ ಓಟದಲ್ಲಿ ದ್ವೀತಿಯ ಸ್ಥಾನ ಪಡೆದು ಭಾರತ ದೇಶಕ್ಕೆ ಕೀರ್ತಿ ತಂದಿದ್ದಾನೆ.

Related Articles
Home add -Advt

ಚೈತನ್ಯ ಸ್ಪೋರ್ಟ್ಸ್ ಹುಬ್ಬಳ್ಳಿಯ ವಿಲಾಸ ನೀಲಗುಂದ ತರಬೇತುದಾರರಾಗಿದ್ದು, ಇಲ್ಲಿಯೆ ತರಬೇತಿ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಹಾಗೂ ಓಲಂಪಿಕ್‌ನಲ್ಲಿ ಭಾಗವಹಿಸಿ ಭಾರತ ದೇಶಕ್ಕೆ ಇನ್ನು ಹೆಚ್ಚಿನ ಚಿನ್ನದ ಪದಕ ಹಾಗೂ ಕೀರ್ತಿ ತಂದು ಕೊಡಲಿ ಎಂದು ಚಿಕ್ಕೋಡಿ ನಿವಾಸಿಗಳು ಹಾರೈಸಿದ್ದಾರೆ.

ಮಾಸ್ಟರ್ ಗೇಮ್ ಈಜು ಸ್ಪರ್ಧೆ: ಜ್ಯೋತಿ ಕೋರಿಗೆ 4 ಚಿನ್ನದ ಪದಕ

Related Articles

Back to top button