Latest

ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು .. ನೆಹರೂ ಅತಿದೊಡ್ಡ ಅತ್ಯಾಚಾರಿ

ಪ್ರಗತಿವಾಹಿನಿ ಸುದ್ದಿ,

  • ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ‘ಅತಿದೊಡ್ಡ ಅತ್ಯಾಚಾರಿ’ ಎಂದು ವಿಎಚ್‌ಪಿ ನಾಯಕಿ ಸಾಧ್ವಿ ಪ್ರಚೀ ಭಾನುವಾರ ಹೇಳಿದ್ದಾರೆ
  • ‘ಭಾರತವು ಅತ್ಯಾಚಾರ ರಾಜಧಾನಿ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿಎಚ್‌ಪಿ ನಾಯಕಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
  • ಭಾರತದ ರಾಮ ಮತ್ತು ಕೃಷ್ಣ ಸಂಸ್ಕೃತಿಯನ್ನು ನೆಹರೂ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರ ನೆಹರೂ ಕುಟುಂಬದ ಉಡುಗೊರೆಗಳಾಗಿವೆ ಎಂದಿದ್ದಾರೆ.

ಭಾರತವು ಅತ್ಯಾಚಾರದ ನೆಲೆಯಾಗಿದೆ ಎಂದ ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು. ಎಲ್ಲಕ್ಕಿಂತ ದೊಡ್ಡ ಅತ್ಯಾಚಾರಿ ನೆಹರೂ ಮತ್ತು ಅವನ ಕುಲ. ಬೇಜವಾಬ್ದಾರಿಯುತವಾಗಿ ಮಾತನಾಡಿರುವ ರಾಹುಲ್ ಗಾಂಧಿ ನಮ್ಮ ದೇಶದ ಮರ್ಯಾದೆ ಕಳೆಯಲು ಯತ್ನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು.

Home add -Advt

ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ನಕ್ಸಲ್ ಮತ್ತು ಅತ್ಯಾಚಾರ ಘಟನೆಗಳಿಗೆ ನೆಹರೂ ಕುಟುಂಬವೇ ಕಾರಣ. ರಾಹುಲ್ ಗಾಂಧಿ ಅವರ ಅಭಿಪ್ರಾಯಗಳಿಗೆ ತಕ್ಷಣ ಕ್ಷಮೆಯಾಚಿಸಬೇಕು – ವಿಎಚ್‌ಪಿ ನಾಯಕಿ ಸಾಧ್ವಿ ಪುರ್ಚಿ

ಈ ನಡುವೆ ರಾಹುಲ್ ಗಾಂಧಿಯವರ ಅತ್ಯಾಚಾರದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿಎಚ್‌ಪಿ ಮುಖಂಡೆ ಸಾಧ್ವಿ ಪ್ರಾಚಿ ಜವಾಹರಲಾಲ್ ನೆಹರೂ ಅವರನ್ನು ‘ಅತಿದೊಡ್ಡ ಅತ್ಯಾಚಾರಿ’ ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ.

ಭಾರತವನ್ನು “ವಿಶ್ವದ ಅತ್ಯಾಚಾರ ರಾಜಧಾನಿ” ಎಂದು ಕರೆಯಲಾಗುತ್ತಿದೆ ಮತ್ತು ಭಾರತವು ತನ್ನ ಮಹಿಳೆಯರನ್ನು ನೋಡಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಇತರ ದೇಶಗಳು ಆಶ್ಚರ್ಯ ಪಡುತ್ತಿವೆ ಎಂದು ರಾಹುಲ್ ಗಾಂಧಿ ಶನಿವಾರ ವಯನಾಡಿನಲ್ಲಿ ಹೇಳಿದ್ದರು.

“ಭಾರತವನ್ನು ವಿಶ್ವದ ಅತ್ಯಾಚಾರ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತವು ತನ್ನ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವಿದೇಶಿ ರಾಷ್ಟ್ರಗಳು ಕೇಳುತ್ತಿವೆ. ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಶಾಸಕರೊಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಪ್ರಧಾನಿ ಈ ಬಗ್ಗೆ ಒಂದು ಮಾತನ್ನೂ ಹೇಳುತ್ತಿಲ್ಲ “ಎಂದು ರಾಹುಲ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು.

Related Articles

Back to top button