ಕುರೇರ್, ಇಟ್ನಾಳ್ ಸೇರಿ 40 ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವ ಶಶಿಧರ ಕುರೇರ, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ 40 ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿಯಾಗಿದೆ. ಹಿರಿಯ ಶ್ರೇಣಿಯಿಂದ ಆಯ್ಕೆ ಶ್ರೇಣಿಗೆ ಅವರಿಗೆಲ್ಲ ಬಡ್ತಿ ಸಿಕ್ಕಿದೆ.
ಎಲ್ಲರನ್ನೂ ಅವರು ಈಗ ಇರುವ ಹುದ್ದೆಗಳಲ್ಲಿಯೇ ಮುಂದುವರಿಸಲಾಗಿದೆ. ಕುರೇರ ಅವರು ಬೆಳಗಾವಿ ಸ್ಮಾರ್ಟಸಿಟಿ ಎಂಡಿಯಾಗಿ ಶನಿವಾರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ.
ಜಹೀರಾ ನಸೀಂ, ಪ್ರವೀಣಕುಮಾರ ಜಿ.ಎಲ್., ಡಾ.ವಿಜಯ ಮಹಾಂತೇಶ ದಾನಮ್ಮನವರ್, ಗೋವಿಂದ ರೆಡ್ಡಿ, ಪ್ರಭುಲಿಂಗ ಕವಳಿಕಟ್ಟಿ, ವೈಶಾಲಿ ಎಂ.ಎಲ್., ಎಸ್.ರಮ್ಯ, ಎಸ್.ಎನ್.ಬಾಲಚಂದ್ರ, ಡಿ.ಭಾರತಿ, ಎ.ಎಂ.ಯೋಗೀಶ್, ಶಿವಪ್ರಸಾದ ಪಿ.ಆರ್., ಜಿ.ಎಂ.ಗಂಗಾಧರಸ್ವಾಮಿ, ನಾಗೇಂದ್ರ ಪ್ರಸಾದ ಕೆ., ಡಾ.ಕುಮಾರ, ವೆಂಕಟೇಶ ಟಿ., ಕೆ.ಎಂ.ಗಾಯತ್ರಿ, ಪೂರ್ಣಿಮಾ ಬಿ.ಆರ್., ಜಯವಿಭವ ಸ್ವಾಮಿ, ಸಂಗಪ್ಪ, ಚಂದ್ರಶೇಖರ ಎನ್, ಪ್ರಭು ಜಿ., ಡಾ.ಅನುರಾಧ ಕೆಎನ್, ನಾಗರಾಜ ಎನ್ ಎಂ, ಬಸವರಾಜು ಎಬಿ, ನವೀನ್ ಕುಮಾರ ರಾಜು ಎಸ್, ಡಾ.ಮಹೇಶ ಎಂ., ಎಸ್.ಜೆ.ಸೋಮಶೇಖರ, ಡಾ.ವಾಸಂತಿ ಅಮರ ಬಿವಿ, ಲಿಂಗಮೂರ್ತಿ ಜಿ., ರಂಗಪ್ಪ ಎಸ್, ಪ್ರಸನ್ನ ಎಚ್., ಇಬ್ರಾಹಿಂ ಮೈಗೂರ, ಪದ್ಮ ಬಸವಂತಪ್ಪ, ಸದಾಶಿವ ಪ್ರಭು ಬಿ, ಪ್ರಕಾಶ ಜಿ.ಟಿ. ನಿಟ್ಟಾಲಿ, ಶಿವಯ್ಯ ಬಿ., ಶ್ರೀರೂಪ, ಕಾಂತರಾಜು ಪಿಎಸ್ ಪದೋನ್ನತಿ ಪಡೆದ ಇತರ ಅಧಿಕಾರಿಗಳು.
ಶಶಿಧರ ಕುರೇರ್ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ
ಸುರೇಶ ಇಟ್ನಾಳ್, ಶಶಿಧರ ಕುರೇರ್ ಗೆ ಹೊಸ ಜವಾಬ್ದಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ