Latest

50 ಆಟೋ ಜಪ್ತು, 25 ಆಟೋಗಳ ವಿರುದ್ಧ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ನಗರ ಪೊಲೀಸ್ ಮತ್ತು ಸಾರಿಗೆ ಇಲಾಖೆ (ಆರ್‌ಟಿಓ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿದ 50 ಆಟೋರಿಕ್ಷಾ ಜಪ್ತು ಮಾಡಿದ್ದಲ್ಲದೆ, 25 ಅಟೋರಿಕ್ಷಾಗಳ ವಿರುದ್ಧ ಐಎಂವ್ಹಿ ಪ್ರಕರಣ ದಾಖಲಿಸಿದ್ದಾರೆ.

ಮೀಟರ್ ಅಳವಡಿಸದಿರುವ, ಬಾಡಿಗೆ ತಿರಸ್ಕರಿಸಿದ ಬಗ್ಗೆ ಹಾಗೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಬಾಡಿಗೆಗೆ ಒತ್ತಾಯಿಸುವ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸದಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಕಮೀಷನರೆಟ್‌ನ ಸಂಚಾರ ವಿಭಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ(ಆರ್‌ಟಿಓ) ಅಧಿಕಾರಿಗಳು ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

 ತಪ್ಪಿತಸ್ಥ ಅಟೋ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಒಟ್ಟು 50 ಆಟೋರಿಕ್ಷಾಗಳನ್ನು ಜಪ್ತು ಪಡಿಸಿಕೊಳ್ಳುವುದರೊಂದಿಗೆ 25 ಆಟೋರಿಕ್ಷಾಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗಿದೆ.

Related Articles

Back to top button