ಮ್ಯಾನೆಜರ್ ನಿಂದ ಬ್ಯಾಂಕ್ ಗೆ 54 ಕೋಟಿ ವಂಚನೆ: ಮ್ಯಾನೆಜರ್ ಮೃತಪಟ್ಟ ಬಳಿಕ ಮಾಹಿತಿ ಬಹಿರಂಗ
ಪ್ರಗತಿವಾಹಿನಿ ಸುದ್ದಿ: ಕಾರವಾರ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ನ ಜನರ ಮ್ಯಾನೆಜರ್ ಬರೊಬ್ಬರಿ 54 ಕೋಟಿ ಅಕ್ರಮ ಎಸೆಗಿದ್ದು, ಗ್ರಾಹಕರು ಪರದಾಡುವಂತೆ ಆಗಿದೆ.
ಕಾರವಾರ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ನಲ್ಲಿ 54 ಕೋಟಿ ವಂಚನೆ ಯಾಗಿದ್ದು ಬ್ಯಾಂಕ್ ಆಡಳಿತ ಮಂಡಳಿ ಇದೀಗ ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದೆ. ಬ್ಯಾಂಕ್ ನಲ್ಲಿ ವಂಚನೆ ಆಗಲು ಕಾರಣ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂದು ಆಡಳಿತ ಮಂಡಳಿ ದೂರು ನಲ್ಲಿ ಉಲ್ಲೇಕಿಸಿದೆ. ಆದರೆ ಕಳೆದ ವರ್ಷ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು ಬ್ಯಾಂಕ್ ನ ಆಡಟ್ ಮಾಡಲು ಮುಂದಾದಾಗ ಬ್ಯಾಂಕ್ ಗೆ ವಂಚನೆ ಆಗಿರುವ ವಿಷಯ ಬೆಳಕಿಗೆ ಬಂದಿದೆ.
ಆಡಳಿತ ಮಂಡಳಿ ಹೇಳುವಂತೆ ಕಳೆದ ಮೂರ್ನಾಲ್ಕು ವರ್ಷದಿಂದ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಸುಮಾರು 54 ಕೋಟಿ ಹಣವನ್ನು ತಮ್ಮ ಸಂಬಂಧಿ, ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಪ್ರತಿ ಬಾರಿಯೂ ಆಡಿಟ್ ಮಾಡುವಾಗ ಇದು ಬ್ಯಾಂಕಿನ ಆಡಳಿತ ಮಂಡಳಿಗೂ ತಿಳಿಯಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು ಸದ್ಯ ಆಡಿಟ್ ಮಾಡಲು ಮುಂದಾದ ವೇಳೆ ಸುಮಾರು 54 ಕೋಟಿ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ನಿರ್ದೇಶಕ ಅರವಿಂದ್ ತೆಂಡುಲ್ಕರ್ ಮಾಹಿತಿ ನೀಡಿದ್ದಾರೆ.
54 ಕೋಟಿ ಹಣ ವಂಚನೆ ಮಾಡಿ, ಯಾರ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ