
ಪ್ರಗತಿವಾಹಿನಿ ಸುದ್ದಿ; ಕಾನ್ಪುರ: ಆರು ವರ್ಷದ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮಗು ದೀಪಾವಳಿ ಹಬ್ಬಕ್ಕೆ ಪಟಾಕಿ ತರಲೆಂದು ಹೋಗಿದ್ದಾಗ ಮಗುವಿನ ಮೇಲೆ ಅಟ್ಟಹಾಸಗೈದಿರುವ ಕಾಮುಕರು, ಮಗುವನ್ನು ಹತ್ಯೆಗೈದು, ಶ್ವಾಸಕೋಶವನ್ನು ಹೊರತೆಗೆದು ವಾಮಾಚಾರಕ್ಕೆ ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ತಲೆಮರೆಸಿಕೊಂಡಿದ್ದು ಇನ್ನುಬ್ಬರು ಆರೋಪಿಗಳಾದ ಅಂಕುಲ್ ಹಾಗೂ ಬಿರಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
 
					 
				 
					 
					 
					 
					
 
					 
					 
					


