Belagavi NewsBelgaum NewsKannada NewsKarnataka NewsLatest

*64 ನೇ ಫಲಪುಷ್ಪ ಪ್ರದರ್ಶನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ (ರಿ) ಹಾಗೂ ಜಿಲ್ಲಾ ಕೃಷಿಕ ಸಮಾಜ, ಬೆಳಗಾವಿ ರವರ ಸಂಯುಕ್ತ ಆಶ್ರಯದಲ್ಲಿ ೨೦೨೩-೨೪ ನೇ ೬೪ ನೇ ಫಲಪುಷ್ಪ ಪ್ರದರ್ಶನವನ್ನು ದಿನಾಂಕ ೦೮-೧೨-೨೦೨೩ ರಿಂದ ೧೦-೧೨-೨೦೨೩ ರವರೆಗೆ ಹ್ಯೂಮ ಪಾರ್ಕ, ಕ್ಲಬ್ ರೋಡ್, ಬೆಳಗಾವಿಯಲ್ಲಿ ಆಯೋಜನೆ ಮಾಡಲಾಗುತ್ತಿದೆ.

ದಿನಾಂಕ ೦೮-೧೨-೨೦೨೩ ರ ಬೆಳಿಗ್ಗೆ ೧೦.೦೦ ಗಂಟೆಗೆ ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಫಲ-ಪುಷ್ಪ ಪ್ರದರ್ಶನದ ಉದ್ಘಾಟಣೆ ಮಾಡಲಿದ್ದಾರೆ. ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪೂರ ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟಣೆ ಮಾಡಲಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತಿ ವಹಿಸುವರು. ಶಾಸಕ ಆಸೀಫ್ ಸೇಠ್ ಅಧ್ಯಕ್ಷತೆಯನ್ನು ವಹಿಸುವರು.

ಫಲಪುಷ್ಪ ಪ್ರದರ್ಶನದಲ್ಲಿ ಪ್ರಗತಿ ಪರ ರೈತರು ಬೆಳೆದಂತಹ ವಿಶೇಷ ಗುಣಮಟ್ಟ ಹೊಂದಿರುವ ತರಕಾರಿ, ಹಣ್ಣು, ಹೂವು, ಸಾಂಬಾರು ಹಾಗೂ ಪ್ಲ್ಯಾಂಟೆಶನ್ ಬೆಳೆಗಳನ್ನು ಪ್ರದರ್ಶಿಸಿಸಲಾಗುವುದು. ವಿವಿಧ ಜಾತಿಯ ಹೂವುಗಳಿಂದ ಅಲಂಕೃತ ಕಲಾಕೃತಿಗಳು, ಉಸುಕಿನ ಕಲೆ, ಹೂವು ಜೋಡನೆ, ಕುಂಡಗಳ ಜೋಡನೆ, ವಿದೇಶ ಹೂವುಗಳ ಪ್ರದರ್ಶನ, ಬೋನ್ಸಾಯ ಪ್ರದರ್ಶನ, ಕಟ್ ಹೂವುಗಳ ಪ್ರದರ್ಶನ, ತರಕಾರಿ/ಹಣ್ಣು ಕೆತ್ತನೆ ಪ್ರದರ್ಶಿಸಲಾಗುವುದು. ಫಲಪುಷ್ಪ ಪ್ರದರ್ಶದಲ್ಲಿ ೨೫ಕ್ಕು ಹೆಚ್ಚು ಗ್ರಾಮೀಣ ಮತ್ತು ಸಣ್ಣ ಉದ್ಯಮ/ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಯಂಕಾಲ ೬.೦೦ ಯಿಂದ ೮.೩೦ ಗಂಟೆಯ ವರೆಗೆ ಆಯೋಜಿಸಲಾಗಿದೆ. ದಿನಾಂಕ ೦೮-೧೨-೨೦೨೩ ರಂದು ಬೆಳಿಗ್ಗೆ ೯.೦೦ ಗಂಟೆಗೆ ರಂಗೋಲಿ ಸ್ಪರ್ದೆಯನ್ನು ಸಹ ಆಯೋಜಿಸಲಾಗಿದೆ ಆಸಕ್ತರು ಭಾಗವಹಿಸಬಹುದು ಹಾಗೂ ಸದರಿ ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ ೧೦.೦೦ಗಂಟೆಯಿAದ ರಾತ್ರಿ ೮.೩೦ ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಗ್ರಾಮೀಣ ಕ್ರೀಡೆ, ಕುಂಬಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಸಾರ್ವಜನಿಕರು/ ರೈತ ಬಾಂಧವರು ಭಾಗವಹಿಸಲು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:೦೮೩೧-೨೪೫೧೪೨೨ ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button