
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ ೭.೮೬ ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ತಾಲೂಕಿನ ಮಸಗುಪ್ಪಿ ಕ್ರಾಸ್ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೭.೮೬ ಕೋಟಿ ರೂಪಾಯಿ ಮೊತ್ತದ ಮೂಡಲಗಿ-ಮಸಗುಪ್ಪಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮಸಗುಪ್ಪಿ, ಗುಜನಟ್ಟಿ, ಜೋಕಾನಟ್ಟಿ, ಧರ್ಮಟ್ಟಿ, ಮೂಡಲಗಿ ಗ್ರಾಮೀಣ ಮತ್ತು ತಿಗಡಿ ಗ್ರಾಮಗಳು ಈ ಪ್ರಯೋಜನೆಕ್ಕೆ ಒಳಪಡಲಿದ್ದು, ಇದರಲ್ಲಿ ೫ ಸೇತುವೆಗಳು ನಿರ್ಮಾಣವಾಗಲಿವೆ, ಮಸಗುಪ್ಪಿ ಕ್ರಾಸದಿಂದ ಮೂಡಲಗಿ ಡಾ.ಅಂಬೇಡ್ಕರ ವೃತ್ತದವರಿಗೆ ರಸ್ತೆ ಕಾಮಗಾರಿ ನಡೆಯಲಿದೆ, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ತಾಲೂಕಾ ಕೇಂದ್ರವಾಗಿರುವ ಮೂಡಲಗಿಗೆ ಸಂಚರಿಸಲು ಉತ್ತಮ ಗುಣಮಟ್ಟದ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ, ಸಾರ್ವಜನಿಕರಿಗೆ ಈ ರಸ್ತೆ ಕಾಮಗಾರಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಲೋಳಸೂರ-ಬಳೋಬಾಳ ರಸ್ತೆ ಸುಧಾರಣೆ: ಲೋಳಸೂರದಿಂದ ಬಳೋಬಾಳವರೆಗಿನ ಆರು ಕಿ.ಮೀ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಜುಲೈ ತಿಂಗಳ ಅಂತ್ಯದೊಳಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈ ಸಂಧರ್ಭದಲ್ಲಿ ನ್ಯಾಯವಾದಿ ಮುತ್ತೆಪ್ಪ ಕುಳ್ಳುರ, ಕಲ್ಲಪ್ಪ ಉಪ್ಪಾರ, ಪತ್ರಯ್ಯಾ ಚರಂತಿಮಠ, ಬಸು ಬುಜನ್ನವರ, ಸಂಜು ಹೊಸಕೋಟಿ, ಬಿ.ಬಿ.ಪೂಜೇರಿ, ಲಕ್ಷ್ಮಣ ಕೆಳಗಡೆ, ಪರಶುರಾಮ ಸನದಿ, ಲಗಮನ್ನ ಕುಟ್ರಿ, ರಾಮಪ್ಪಾ ಅರಭಾವಿ, ಮಹಾದೇವ ಬಡ್ಡಿ, ಬರಮಪ್ಪ ಅಶಿರೋಟ್ಟಿ, ಎ.ಇ ಮಲ್ಲೇಶ ದೇಶೂರ, ಸುಧಾಕರ ಶೆಟ್ಟಿ, ಎನ್.ಎಸ್.ಎಫ್ ಅತಿಥಿಗೃಹದ ಸಿ.ಪಿ.ಯಕ್ಸಂಬಿ, ಜನ ಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಭಿನ್ನಮತೀಯರಿಗೆ ದೊಡ್ಡ ಶಾಕ್ ನೀಡಿದ ಅರುಣ ಸಿಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ