Latest

ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಕಾರವಾರ  : ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶೈಕ್ಷಣ ಕ ಅಭಿವೃದ್ಧಿಗಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಥಮಿಕ ಬಿಐಇಆರ್‌ಟಿ ಹುದ್ದೆಗೆ ಅರ್ಜಿಸಲ್ಲಿಸಬಯಸುವ ಅಭ್ಯರ್ಥಿಗಳು ಸ್ಪೇಷಲ್ ಡಿಎಡ್ ಅಥವಾ ಎಮ್‌ಸಿಟಿಟಿ ವಿದ್ಯಾರ್ಹತೆ ಹೊಂದಿರಬೇಕು. ಪ್ರೌಢಶಾಲಾ ಬಿಐಇಆರ್‌ಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಪೇಷಲ್ ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು. ಎರಡೂ ಹುದ್ದೆಗಳಿಗೆ ಆರ್ ಸಿ ಐ ಪ್ರಮಾಣ ಪತ್ರ ಹೊಂದಿರುವುದು ಅವಶ್ಯಕ.
ಆಸಕ್ತರು ಜೂ ೨೨ ರೊಳಗಾಗಿ ಉಪ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಜಿಲ್ಲೆ ಶಿರಸಿ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ ೯೮೮೦೨೮೦೧೨೭ ಅಥವಾ ದೂ ೦೮೩೮೪-೧೩೪೫೧೨ ನ್ನು ಸಂಪರ್ಕಿಸಬಹುದಾಗಿದೆ ಎಂದು ಶಿರಸಿಯ ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಭಿನ್ನಮತೀಯರಿಗೆ ದೊಡ್ಡ ಶಾಕ್ ನೀಡಿದ ಅರುಣ ಸಿಂಗ್

Home add -Advt

ಬೆಳಗಾವಿ: ಪತ್ನಿ ಸಾವಿನ ಒಂದೇ ಗಂಟೆಯಲ್ಲಿ ಕೊನೆಯುಸಿರೆಳೆದ ಪತಿ

Related Articles

Back to top button