CrimeKannada NewsNational

*7 ಜನ ಪಾಕ್ ಗೂಢಾಚಾರಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಬೆಂಬಲಿತ ಪ್ರಮುಖ ಉಗ್ರ ಮತ್ತು ಅಪರಾಧ ಜಾಲವನ್ನು ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿ ಭೇದಿಸಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ  ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶದ ಘಾಜಿಯಾಬಾದ್ ನಿವಾಸಿಗಳಾದ ಅನಸ್ ತ್ಯಾಗಿ, ಮೋಹಿತ್ ಅಲಿಯಾಸ್ ಯೋಗಿ, ದೀಪಕ್ ಅಪ್ರೋಲಾ, ಆರಿಫ್, ಜತನ್, ಸಾಬಿರ್ ಮತ್ತು ಪಂಜಾಬ್‌ನ ಕರನ್‌ವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 26 ರಿಂದ 38 ವರ್ಷದೊಳಗಿನ ಯುವಕರಾಗಿದ್ದು, ಇವರಲ್ಲಿ ಬಹುತೇಕರು ಕೊಲೆ, ಕೊಲೆ ಯತ್ನ ಹಾಗೂ ದರೋಡೆಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ.

ಇವರನ್ನು ಪಾಕಿಸ್ತಾನ ಮೂಲದ ದರೋಡೆಕೋರ ಹಾಗೂ ಉಗ್ರ ಶಹಜಾದ್ ಭಟ್ಟಿ ಮತ್ತು ಆತನ ಸಹಚರ ಅಜ್ಜಲ್ ಗುಜ್ಜರ್ ಈ ಇಡೀ ಜಾಲವನ್ನು ಮುನ್ನಡೆಸುತ್ತಿದ್ದರು. ಇವರಿಬ್ಬರು ಪಾಕಿಸ್ತಾನದ ಐಎಸ್‌ಐ ಆಶ್ರಯದಲ್ಲಿ ಭಾರತದ ಯುವಕರನ್ನು ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಗಂಭೀರ ಸಂಚು ರೂಪಿಸಿದ್ದರು.

ಪಾಕಿಸ್ತಾನದ ಗಡಿಯಿಂದ ಪಂಜಾಬ್‌ಗೆ ಡೋನ್‌ಗಳ ಮೂಲಕ ಕಳುಹಿಸಲಾಗುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಹೆರಾಯಿನ್‌ನಂತಹ ಮಾದಕ ದ್ರವ್ಯಗಳನ್ನು ಈ ಜಾಲವು ಸಂಗ್ರಹಿಸುತ್ತಿತ್ತು. ಬಳಿಕ ಇವುಗಳನ್ನು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಎನ್‌ಸಿಆ‌ರ್ ಪ್ರದೇಶಗಳಿಗೆ ರವಾನಿಸಿ ಮಾರಾಟ ಮಾಡಲಾಗುತ್ತಿತ್ತು. ಹೀಗೆ ಬಂದ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಮೇ ತಿಂಗಳಲ್ಲಿ ಸಿಕ್ಕ ನಿಖರ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ಆರಂಭಿಸಿದ ದೆಹಲಿ ಪೊಲೀಸರು, ಮೊದಲು ಯಮುನಾ ವಿಹಾರ್ ಬಳಿ ಮೋಹಿತ್ ಎಂಬಾತನನ್ನು ವಶಕ್ಕೆ ಪಡೆದರು. ಆತನ ಮೊಬೈಲ್‌ನಲ್ಲಿದ್ದ ಪಾಕಿಸ್ತಾನದ ಉಗ್ರರೊಂದಿಗಿನ ಚಾಟ್‌ಗಳು ಮತ್ತು ಆಡಿಯೋ ಸಂದೇಶಗಳನ್ನು ಪರಿಶೀಲಿಸಿದಾಗ ಇಡೀ ಜಾಲದ ಕರಾಳ ಮುಖ ಬಯಲಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಉಳಿದ ಆರು ಮಂದಿಯನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 5 ಅತ್ಯಾಧುನಿಕ ಸೆಮಿ ಅಟೋಮ್ಯಾಟಿಕ್ ಪಿಸ್ತೂಲ್‌ಗಳು, 41 ಜೀವಂತ ಗುಂಡುಗಳು, ಶಹಜಾದ್ ಭಟ್ಟಿ ಮತ್ತು ಅಜ್ಜಲ್ ಗುಜ್ಜರ್ ಜೊತೆಗಿನ ಸಂಭಾಷಣೆ ಒಳಗೊಂಡ 7 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಜಪ್ತಿ ಮಾಡಲಾಗಿದೆ. 

Related Articles

Back to top button