
ಪ್ರಗತಿವಾಹಿನಿ ಸುದ್ದಿ : ಕುಡಿಯುವ ನೀರಿನ ಕೊಳವೆಗೆ ಚರಂಡಿ ನೀರು ಮಿಶ್ರಣಗೊಂಡ ನೀರು ಸೇವಿಸಿ ಎಂಟು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಮಧ್ಯಪ್ರದೇಶನಲ್ಲಿ ಈ ದುರಂತ ಸಂಭವಿಸಿದೆ. ಡಿ. 25 ರಂದು ಭಗೀರಥಪುರ ನಗರಪಾಲಿಕೆಯಿಂದ ಪೂರೈಕೆಯಾದ ನೀರಿನಲ್ಲಿ ಕೊಳಚೆ ನೀರು ಮಿಶ್ರಣವಾಗಿತ್ತು.
ಸಿಎಂ ಮೋಹನ್ ಯಾದವ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರು ಮುನ್ಸಿಪಲ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಓರ್ವ ಹೆಲ್ತ್ ಎಂಜಿನೀಯರ್ ರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ವಲಯಾಧಿಕಾರಿ ಸಾಲಿಗ್ರಾಮ್ ಸಿತೋಳೆ ಮತ್ತು ಅಸಿಸ್ಟೆಂಟ್ ಎಂಜಿನೀಯರ್ ಯೋಗೇಶ್ ಜೋಷಿ ಅಮಾನತುಗೊಂಡ ಅಧಿಗಳಾಗಿದ್ದಾರೆ. ಪಿಎಚ್ಇ ಶುಭಂ ಶ್ರೀವಾಸ್ತವ್ ಅವರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಸಿಎಂ ಮೋಹನ್ ಯಾದವ್, ಅವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.




