*ಬೆಳಗಾವಿಯಲ್ಲಿ 8 ಸಾವಿರ ಮಹಿಳೆಯರಿಗೆ 12 ಕೋಟಿ ವಂಚನೆ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿ ಕೆಲಸ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ಎಂಬ ವ್ಯಕ್ತಿ ಸಾವಿರಾರು ಮಹಿಳೆಯರಿಗೆ ವರ್ಕ್ ಪ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿಸಿದ್ದಾನೆ.
ಸುಮಾರು 8000 ಕ್ಕೂ ಹೆಚ್ಚು ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಎಸ್ಕೆಪ್ ಆಗಿದ್ದಾನೆ. ಮನೆಯಲ್ಲಿ ಕುಳಿತುಕೊಂಡು ಅಗರಬತ್ತಿಗಳನ್ನು ಪ್ಯಾಕ್ ಮಾಡುವುದರಿಂದ ಪ್ರತಿ ತಿಂಗಳು 2,500 ರೂ. ಗಳಿಸಬಹುದು ಎಂದು ಮಹಿಳೆಯನ್ನು ವಂಚಿಸಲಾಗಿದೆ.
ಮಹಿಳೆಯಿಂದ ಒಂದು ಗುರುತಿನ ಚೀಟಿ ರಚಿಸಲು 2,500 ರಿಂದ 5,000 ರೂ.ಗಳವರೆಗೆ ಹಣವನ್ನು ಸಂಗ್ರಹಿಸಿದ್ದನು. ಪ್ರತಿಯೊಬ್ಬ ನೇಮಕಾತಿದಾರರಿಗೂ ಚೈನ್-ಮಾರ್ಕೆಟಿಂಗ್ ನೆಪ ಕೊಟ್ಟು ವಂಚನೆ ಮಾಡಲಾಗಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಸೆರೆಗೆ ಮುಂದಾಗಿದ್ದಾರೆ. ಕೆಲಸದ ಆಸೆಗೆ ಹಣ ಕಳೆದುಕೊಂಡ ಮಹಿಳೆಯರು ಕಂಗಾಲಾಗಿದ್ದಾರೆ. ಈ ಬಗ್ಗೆ ಮೋಸ ಹೋದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.




